ವೈಯಕ್ತಿಕವಾಗಿ ಹಣ ಪಡೆದಿಲ್ಲ: ಸ್ಪಷ್ಟನೆ

7

ವೈಯಕ್ತಿಕವಾಗಿ ಹಣ ಪಡೆದಿಲ್ಲ: ಸ್ಪಷ್ಟನೆ

Published:
Updated:

ಹಾವೇರಿ: ಪಕ್ಷ ಆಯೋಜಿಸಿದ್ದ ಪರಿಶಿಷ್ಟ ಜಾತಿಯ ಸಮಾವೇಶಕ್ಕಾಗಿ ಹಾವನೂರ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸಾರ್ವಜನಿಕರನ್ನು ಕರೆತರುವ ವಾಹನದ ವ್ಯವಸ್ಥೆಗಾಗಿ ನಿಂಗಪ್ಪ ಮೈಲಾರ ₹ 50 ಸಾವಿರ ಖರ್ಚು ಮಾಡಿದ್ದು, ಆ ಹಣವನ್ನು ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಗ್ರಾಮೀಣ ಘಟಕದ ಅಧ್ಯಕ್ಷ ಮುತ್ತಯ್ಯ ಕಿತ್ತೂರಮಠ ಹಾಗೂ ನಗರ ಘಟಕದ ಅಧ್ಯಕ್ಷ ನಿರಂಜನ ಹೇರೂರ ಇತರ ಹಣ ಹಂಚಿಕೆ ಸಂದರ್ಭದಲ್ಲಿ ಸಂದಾಯ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕ ಪ್ರಕಟಣೆ ತಿಳಿಸಿದೆ.

₹50 ಸಾವಿರವನ್ನು ಅವರು ಸಂಘಟನೆಗಾಗಿ ಖರ್ಚು ಮಾಡಿದಕ್ಕೆ ವಾಪಸ್ ನೀಡಲಾಗಿತ್ತೇ ಹೊರತು, ವೈಯಕ್ತಿಕವಾಗಿ ಅವರು ಯಾವುದೇ ಹಣ ಪಡೆದಿಲ್ಲ. ಅವರು ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಆಕಾಂಕ್ಷಿಯೂ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !