ಟಿಪ್ಪು ಜಯಂತಿ: ಬಿಜೆಪಿ ಪ್ರತಿಭಟನೆ

7
ರ್‍ಯಾಲಿ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಪೊಲೀಸ್

ಟಿಪ್ಪು ಜಯಂತಿ: ಬಿಜೆಪಿ ಪ್ರತಿಭಟನೆ

Published:
Updated:
Deccan Herald

ಹಾವೇರಿ: ಸರ್ಕಾರ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸಿ ನಗರದಲ್ಲಿನ ಬಿಜೆಪಿ ಜಿಲ್ಲಾ ಘಟಕದ ಕಾರ್ಯಾಲಯದ ಮುಂದೆ ಶುಕ್ರವಾರ ಕರಾಳ ದಿನಾಚರಣೆ ಮಾಡಿ, ರ್‍ಯಾಲಿ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆಗೊಳಿಸಿದರು.

ಇದಕ್ಕೂ ಮೊದಲು ಕರಾಳ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ದೇಶಕ್ಕೆ ಕೊಡುಗೆ ನೀಡಿದ ಹಲವಾರು ಮುಸ್ಲಿಂ ನಾಯಕರಿದ್ದಾರೆ. ಅಂತಹವರ ಪೈಕಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್‌ ಕಲಾಂ, ಶಿಶುನಾಳ ಶರೀಫ್‌ರ ಜಯಂತಿಯನ್ನು ಸರ್ಕಾರ ಆಚರಿಸಲಿ ಎಂದರು.

ಟಿಪ್ಪು ಇತಿಹಾಸವನ್ನು ಮೊದಲು ಓದಿ ತಿಳಿದುಕೊಳ್ಳಬೇಕು. ಟಿಪ್ಪು ರಾಜನ ಕರ್ತವ್ಯ ಮೆರೆಯುವ ಬದಲಾಗಿ, ಕನ್ನಡ ವಿರೋಧಿ, ಮತಾಂಧನಾಗಿ ಕಾರ್ಯ ನಿರ್ವಹಿಸಿದ್ದನು ಎಂದು ಆರೋಪಿಸಿದರು.

ಟಿಪ್ಪು ಸಾವಿರಾರು ಜನರನ್ನು ಹತ್ಯೆ ಮಾಡಿದ್ದನು. ಅವನ ಜಯಂತಿ ಆಚರಣೆ ಮಾಡುವುದೇ ಹೀನ ಕೃತ್ಯ. ಹೀಗಾಗಿ, ಸರ್ಕಾರವು ಟಿಪ್ಪು ಜಯಂತಿ ಆಚರಣೆಯ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದರು.

ರಾಜ್ಯದಲ್ಲಿ ಅನೈತಿಕ ಸಂಬಂಧದ ಸಮ್ಮಿಶ್ರ ಸರ್ಕಾರವು ಅಸ್ತಿತ್ವದಲ್ಲಿದೆ. ಕಾಂಗ್ರೆಸ್‌ ನೆರವಿನೊಂದಿಗೆ ಜೆಡಿಎಸ್‌ ಅಧಿಕಾರ ನಡೆಸುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಟಿಪ್ಪು ಜಯಂತಿ ಆಚರಣೆಗೆ ಒಪ್ಪಿಗೆ ನೀಡಿದ್ದಾರೆ ಎಂದರು.

ಪ್ರತಿಭಟನಾ ರ್‍ಯಾಲಿ ನಡೆಸಲು ಮುಂದಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಬಳಿಕ ಬಿಡುಗಡೆಗೊಳಿಸಿದರು.

ಮಾಜಿ ಶಾಸಕ ಯು.ಬಿ. ಬಣಕಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ ಕಲಕೋಟಿ, ನಿರಂಜನ ಹೇರೂರ, ಮುತ್ತಯ್ಯ ಕಿತ್ತೂರಮಠ, ನಿಂಗಪ್ಪ ಗೊಬ್ಬೇರ, ಗಿರೀಶ ತುಪ್ಪದ, ವೀರೇಂದ್ರ ಶೆಟ್ಟರ, ರಮೇಶ ಪಾಲನಕರ, ಚಿಕ್ಕಪ್ಪ ದೊಡ್ಡತಳವಾರ, ಕೆ.ಬಿ. ಮಲ್ಲಿಕಾರ್ಜುನ, ಪ್ರಶಾಂತ ಗಾಣಿಗೇರ, ನಂಜುಂಡೇಶ ಕಳ್ಳೇರ, ಶಿವಕುಮಾರ ತಿಪ್ಪಣ್ಣಶೆಟ್ಟಿ, ವೆಂಕಟೇಶ ನಾರಾಯಣಿ, ಡಾ. ಸಂತೋಷ ಆಲದಕಟ್ಟಿ ಇದ್ದರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !