ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಮ್ಮಾಯಿಗೆ ಅಧಿಕಾರದ ಗುಂಗು ದೊಡ್ಡದು: ಮಯೂರ್

ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ
Published : 13 ಆಗಸ್ಟ್ 2024, 15:35 IST
Last Updated : 13 ಆಗಸ್ಟ್ 2024, 15:35 IST
ಫಾಲೋ ಮಾಡಿ
Comments

ಶಿಗ್ಗಾವಿ: ‘ಸಂಸದ ಬಸವರಾಜ ಬೊಮ್ಮಾಯಿ ಅವರು ಕಳೆದ 20 ವರ್ಷಗಳಿಂದ ಈ ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಈಗ ಮತದಾರರನ್ನು ಕಡೆಗಣಿಸಿ ಸಂಸದರಾಗಿ ಕ್ಷೇತ್ರ ಬಿಟ್ಟು ಹೋಗಿದ್ದಾರೆ. ಹೀಗಾಗಿ ಜನಪರ ಕಾಳಜಿ, ಅಭಿವೃದ್ಧಿಪರ ಚಿಂತನೆಗಳಿಗಿಂತ ಅಧಿಕಾರದ ಗುಂಗು ದೊಡ್ಡದಾಗಿದೆ. ಅಂತಹ ನಾಯಕರಿಗೆ ಜನ ಪಾಠ ಕಲಿಸಲಿದ್ದಾರೆ’ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಹೇಳಿದರು.

ತಾಲ್ಲೂಕಿನ ಬನ್ನೂರ ಗ್ರಾಮ ಸೇರಿದಂತೆ ಕಬನೂರ, ಕ್ಯಾಲಕೊಂಡ, ಶಿಶುವಿನಹಾಳ, ಅತ್ತೀಗೇರಿ, ಹುಲಗೂರ, ಬಸವನಾಳ ಗ್ರಾಮಗಳಲ್ಲಿ ಮಂಗಳವಾರ ನಡೆದ ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷದ ಸದೃಢಗೊಳಿಸಬೇಕು. ಅದರಿಂದ ಪಕ್ಷ ಪ್ರಬಲವಾಗಿ ಬೆಳೆಯಲು ಸಾಧ್ಯವಿದೆ’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮುಖಂಡ ಯಾಸಿರಖಾನ್ ಪಠಾಣ ಮಾತನಾಡಿ, ‘ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದೆ ನರಳುತ್ತಿದೆ. ಗ್ರಂಥಾಲಯಗಳು, ಆಸ್ಪತ್ರೆಗಳು ಸೋರುತ್ತಿವೆ. ಅದರಿಂದಾಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ದೊಡ್ಡ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರ ಜತೆಗೆ ಅವುಗಳ ನಿರ್ವಹಣೆ ಮುಖ್ಯವಾಗಿದೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮುಖಂಡ ಶಿವಾನಂದ ರಾಮಗೇರಿ ಮಾತನಾಡಿದರು.‌ ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಖಾದ್ರಿ, ವಿನೋದ್ ಅಸೂಟಿ, ಮಾಜಿ ಸಚಿವ ಆರ್ ಶಂಕರ್, ಸಿ.ಎಂ. ಪೈಜ್, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ಮಾಜಿ ಸದಸ್ಯ ಶ್ರೀಕಾಂತ ಪೂಜಾರ, ಸುಧೀರ ಲಮಾಣಿ, ಮಾಲತೇಶ ಸಾಲಿ, ಹನುಮಂತಪ್ಪ ಬಂಡಿವಡ್ಡರ, ಮುದಕಪ್ಪ ಹೊಸಪೇಟಿ, ಸುಬಹಾನಿ ಚೂಡಿಗಾರ, ಪ್ರಭುಗೌಡ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT