ಬುಧವಾರ, ಜೂನ್ 23, 2021
23 °C

ಲಾವಣಿ ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ವೀರಸೌಧದಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹುತಾತ್ಮ ಮೈಲಾರ ಮಹಾದೇವಪ್ಪನವರ ಕುರಿತು ಜಮಖಂಡಿಯ ಡಾ.ಶಾರದಾ ಮುಳ್ಳೂರ ಬರೆದ ‘ಮೈಲಾರ ಮಹಾದೇವಪ್ಪ ಲಾವಣಿಗಳು’ ಪುಸ್ತಕವನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಬಿಡುಗಡೆ ಮಾಡಿದರು.

‘ದೇಶಕ್ಕಾಗಿ ಜೀವ ಬಲಿದಾನ ಮಾಡಿದವರನ್ನು ಸ್ಮರಿಸುವುದೇ ನಿಜವಾದ ಸ್ವಾತಂತ್ರ್ಯೋತ್ಸವ. ಕೋವಿಡ್‌ ಸಂದರ್ಭದಲ್ಲೂ ದೇಶಪ್ರೇಮ ಮತ್ತು ಆರೋಗ್ಯ ಕಾಳಜಿಯನ್ನು ಮರೆಯಬಾರದು. ಡಾ.ಶಾರದಾ ಮುಳ್ಳೂರು ದೂರದ ಬಾಗಲಕೋಟೆಯಿಂದ ನಮ್ಮ ಮಹಾದೇವಪ್ಪನವರ ಕುರಿತು, ಜೀವನ ವೃತ್ತಾಂತದ ಲಾವಣಿ ಬರೆದದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಆಶ್ರಯದಲ್ಲಿ ನಡೆದ ಪುಸ್ತಕ ಬಿಡುಗಡೆಯಲ್ಲಿ ಸರ್ವಶ್ರೀ ಮೈಲಾರ ಮಹಾದೇವರ ಮೊಮ್ಮಗ ಎಚ್‌.ಎಸ್. ಮಹಾದೇವ, ವಿ.ಎನ್‌. ತಿಪ್ಪನಗೌಡರ, ಸಾಹಿತಿ ಸತೀಶ ಕುಲಕರ್ಣಿ, ನಾಗೇಂದ್ರ ಕಟಕೋಳ, ಮಲ್ಲಿಕಾರ್ಜುನ ಮಠದ, ಪರಮೇಶಪ್ಪ ಮೈಲಾರ, ಮಂಜುಳಾ ಕರಬಸಮ್ಮನವರ, ಪ್ರೊ.ಶಿವನಗೌಡ ತಿಪ್ಪನಗೌಡರ, ವಲ್ಲಭ ಕುಲಕರ್ಣಿ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.