ಗುರುವಾರ , ಜುಲೈ 29, 2021
20 °C

ಅಶ್ಲೀಲ ಚಿತ್ರಗಳ ಪ್ರಸಾರ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಯುವತಿಯ ಅಶ್ಲೀಲ ಚಿತ್ರಗಳನ್ನು ಆಕೆಯ ಸಂಬಂಧಿಕರು, ಸ್ನೇಹಿತರು ಮತ್ತು ಆಕೆ ಓದಿದ್ದ ಕಾಲೇಜಿನ ಮೇಲ್‌ಗೆ ಕಳುಹಿಸಿ, ಪದೇ ಪದೇ ತೊಂದರೆ ಕೊಡುತ್ತಿದ್ದ ಆರೋಪಿ ವಿರುದ್ಧ ಹಾವೇರಿಯ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ಪ್ರಜ್ವಲ್‌ ಕಾಳಣ್ಣವರ ಮತ್ತು ಆತನ ತಂದೆ ಮಹಾಂತೇಶ ಕಾಳಣ್ಣವರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಪ್ರಸ್ತುತ ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ ನಿವಾಸಿಗಳಾಗಿದ್ದಾರೆ. 

ಹಾವೇರಿ ಜಿಲ್ಲೆಯ ಯುವತಿಯೊಂದಿಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದ ಪ್ರಜ್ವಲ್‌, ಆಕೆಯ ಜತೆ ಕೆಲವು ದಿನ ಸುತ್ತಾಡಿ, ಕೆಲವು ಫೋಟೊಗಳನ್ನು ಮೊಬೈಲ್‌ನಲ್ಲಿ ಪರಸ್ಪರ ಶೇರ್‌ ಮಾಡಿಕೊಂಡಿದ್ದರು. ನಂತರ ಯುವತಿಯ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಮದುವೆ ಸಂಬಂಧವನ್ನು ಮುರಿದುಕೊಂಡಿದ್ದ. 

ನಂತರ ಹೊಸ ಇ–ಮೇಲ್‌ ಒಂದನ್ನು ಸೃಷ್ಟಿಸಿ, ಯುವತಿಯ ಸಂಬಂಧಿಕರು, ಸ್ನೇಹಿತರಿಗೆ ಯುವತಿಯ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ತೊಂದರೆ ಕೊಡುತ್ತಿದ್ದ. ಈ ವಿಷಯದ ಬಗ್ಗೆ ಪ್ರಜ್ವಲ್‌ ಅವರ ತಂದೆಯವರ ಗಮನಕ್ಕೆ ತಂದಾಗ, ತಂದೆ ಕೂಡ ಯುವತಿಯ ಕುಟುಂಬಸ್ಥರನ್ನು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿಲಾಗಿದೆ. 

ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು