ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಉತ್ಪಾದನೆ ಹೆಚ್ಚಳ

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ಜನವರಿ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯು ಗರಿಷ್ಠ ದರವಾದ ಶೇ7.5ರಷ್ಟು ಬೆಳವಣಿಗೆ ದಾಖಲಿಸಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಒಂದು ವರ್ಷದ ಹಿಂದೆ ಶೇ 3.5ರಷ್ಟಿತ್ತು. ಈ ಸೂಚ್ಯಂಕದಲ್ಲಿ ಬಹುಪಾಲು (ಶೇ 77.63) ಹೊಂದಿರುವ ತಯಾರಿಕಾ ರಂಗದಲ್ಲಿನ ಜನವರಿ ತಿಂಗಳ ಬೆಳವಣಿಗೆಯು ಶೇ 8.7ರಷ್ಟಿತ್ತು. ಇದು ದೇಶಿ ಆರ್ಥಿಕತೆಯಲ್ಲಿನ ಚೇತರಿಕೆ ಸೂಚಿಸುತ್ತದೆ. 2017ರ ಜನವರಿಯಲ್ಲಿ ಇದು ಶೇ 2.5ರಷ್ಟಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.

ತಯಾರಿಕಾ ವಲಯದ 23 ಕೈಗಾರಿಕಾ ವಲಯಗಳ ಪೈಕಿ 16 ವಲಯಗಳು ಬೆಳವಣಿಗೆ ಕಂಡಿವೆ. ಬಂಡವಾಳ ಹೂಡಿಕೆಯ ಮಾನದಂಡವಾಗಿರುವ ಭಾರಿ ಯಂತ್ರೋಪಕರಣಗಳ ತಯಾರಿಕೆಯು ವರ್ಷದ ಹಿಂದೆ ಶೇ 0.6ರಷ್ಟು ಕುಸಿತ ಕಂಡಿತ್ತು.  ಈಗ ಶೇ 14.6ರಷ್ಟು ಪ್ರಗತಿ ಸಾಧಿಸಿದೆ. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ ತಯಾರಿಕೆಯೂ ಶೇ 10.5ರಷ್ಟು ವೃದ್ಧಿ ದಾಖಲಿಸಿದೆ. ಗಣಿಗಾರಿಕೆ ವಲಯದಲ್ಲಿ ಬೆಳವಣಿಗೆಯು ಮಾತ್ರ ಯಥಾಸ್ಥಿತಿಯಲ್ಲಿದೆ.

ಆದರೆ, ಏಪ್ರಿಲ್‌ನಿಂದ ಜನವರಿವರೆಗಿನ ಅವಧಿಯಲ್ಲಿ ‘ಐಐಪಿ’ ಪ್ರಗತಿಯು ಶೇ 4.1ರಷ್ಟಿದ್ದರೆ, ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ 5ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT