ಪ್ರಜಾವಾಣಿ ವಾರ್ತೆ

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಯಲ್ಲಿ ಮಾರ್ಚ್ 12ರಂದು 1,75,545 ಚೀಲ (43,886 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿದ್ದು, ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಪ್ರಸಕ್ತ ಹಂಗಾಮಿನಲ್ಲಿ ಮೊದಲ ಬಾರಿಗೆ ಅತೀ ಹೆಚ್ಚು ಮೆಣಸಿನಕಾಯಿ ಆವಕವಾದಂತಾಗಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್–ಇಸ್ರೇಲ್ ಮಧ್ಯ ಯುದ್ಧ ಮುಂದುವರಿದಿದ್ದರೂ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬರಲಿಲ್ಲ. ಇಂದು ರಾಯಚೂರು, ಬಳ್ಳಾರಿ, ವಿಜಯಪುರ, ಷಹಾಪುರ ಭಾಗದಲ್ಲಿ ಬೆಳೆದ ಮೆಣಸಿನಕಾಯಿಯನ್ನು ರೈತರು ಮಾರಾಟಕ್ಕೆ ತಂದಿದ್ದು, ಈ ಪೈಕಿ 5,531 ವೆರೈಟಿ ಮೆಣಸಿಕಾಯಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಆದರೆ ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ ಪ್ರಮಾಣ ಕಡಿಮೆ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆ ಕಳೆದ ವಾರ ಮಾರುಕಟೆಯಲ್ಲಿ 3,63,200 ಚೀಲ (90,800ಕ್ವಿಂಟಲ್) ಮೆಣಸಿನಾಕಯಿ ಮಾರಾಟವಾದಂತಾಗಿದೆ. ಕಳೆದ ಮಾರ್ಚ್ 9 ರಂದು ಮಾರುಕಟ್ಟೆಯಲ್ಲಿ 1,55,110 ಚೀಲ (38,777 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿತ್ತು, ಗುರುವಾರ ಒಟ್ಟಾರೆ 16,921 ಲಾಟ್ ಮೆಣಸಿನಕಾಯಿ ಚೀಲಗಳನ್ನು ಟೆಂಡರ್ಗೆ ಇಡಲಾಗಿದ್ದು, ತೇವಾಂಶ ಹೆಚ್ಚಿರುವ ಹಾಗೂ ಕಡಿಮೆ ಗುಣಮಟ್ಟದ 313 ಲಾಟ್ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ.

ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ಗೆ ₹64,679 ರಂತೆ, ಕಡ್ಡಿ ಮೆಣಸಿನಕಾಯಿ ₹62,222ರಂತೆ ಮತ್ತು ಗುಂಟೂರು ತಳಿ ₹17,899ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿ ಸ್ಥಿರತೆ ಕಾಯ್ದುಕೊಂಡಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಕಡ್ಡಿ ₹48,029, ಬ್ಯಾಡಗಿ ಡಬ್ಬಿ ₹51,229 ಹಾಗೂ ಗುಂಟೂರ ತಳಿ ₹13,829ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 417 ಖರೀದಿ ವರ್ತಕರು ಪಾಲ್ಗೊಂಡಿದ್ದರು. ಅವರು ಒಟ್ಟಾರೆ 1.58 ಲಕ್ಷ ಬಾರಿ ದರವನ್ನು ಕೋಟ್ ಮಾಡಿದ್ದಾರೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಗುರುವಾರದ ದರ (ಪ್ರತಿ ಕ್ವಿಂಟಲ್ಗೆ)

ತಳಿ;ಕನಿಷ್ಠ;ಗರಿಷ್ಠ
ಕಡ್ಡಿ ಮೆಣಸಿನಕಾಯಿ;₹4,209;₹62,222
ಡಬ್ಬಿ ತಳಿ;₹5,109;₹64,679
ಗುಂಟೂರು ತಳಿ;₹1,509;₹17,899

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.