ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಸ್ಥಿರತೆ

Published 1 ಸೆಪ್ಟೆಂಬರ್ 2023, 13:48 IST
Last Updated 1 ಸೆಪ್ಟೆಂಬರ್ 2023, 13:48 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶುಕ್ರವಾರ 2,160 ಕ್ವಿಂಟಲ್ ಮೆಣಸಿನಕಾಯಿ ಬಂದಿದ್ದು, ಆವಕದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಕಳೆದ ಮಂಗಳವಾರ ಮರುಕಟ್ಟೆಗೆ 2,124 ಕ್ವಿಂಟಲ್ ಮೆಣಸಿನಕಾಯಿ ಆವಕವಾಗಿತ್ತು. ಶುಕ್ರವಾರ ತೇವಾಂಶ ಹೆಚ್ಚಿರುವ ಹಾಗೂ ಕನಿಷ್ಢ ಗುಣಮಟ್ಟ ಹೊಂದಿರದ 43 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. 10 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹58,000, 31 ಚೀಲ ಕಡ್ಡಿ ಮೆಣಸಿನಕಾಯಿ ₹51,200 ಮತ್ತು ಗುಂಟೂರ ತಳಿ ₹18,709 ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.

ಸರಾಸರಿ ಬೆಲೆಯಲ್ಲಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹41,009, ಕಡ್ಡಿ ಮೆಣಸಿನಕಾಯಿ ₹32,699 ಹಾಗೂ ಗುಂಟೂರು ತಳಿ ₹16,229ಕ್ಕೆ ಮಾರಾಟವಾಗಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಒಟ್ಟು85 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT