ಬ್ಯಾಡಗಿ: ತಾಲ್ಲೂಕಿನ ಪಟ್ಟಣ, ಮೋಟೆಬೆನ್ನೂರು, ಚಿಕ್ಕಬಾಸೂರು ಹಾಗೂ ಕಾಗಿನೆಲೆ ರೈತ ಸಂಪರ್ಕ ಕೇಂದ್ರಗಳಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು.

ಶಾಸಕರ ಅನುಪಸ್ಥಿತಿಯಲ್ಲಿ ಕೃಷಿಕ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯುಕ್ತವಾಗಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಬಿತ್ತನೆ ಬೀಜ ವಿತರಣೆಯ ಸುದ್ದಿ ತಿಳಿದ ರೈತರು ಬೆಳಿಗ್ಗೆಯಿಂದಲೇ ಸಾಲಾಗಿ ನಿಂತು ಬಿತ್ತನೆ ಬೀಜಗಳನ್ನು ಪಡೆದುಕೊಂಡರು. ಕಳೆದ ವರ್ಷ ಗೋವಿನಜೋಳದ ಬೆಳೆಯಲ್ಲಿ ಮುಳ್ಳು ಸಜ್ಜೆ ವಿಪರೀತ ಬೆಳೆದ ಪರಿಣಾಮ ಅದನ್ನು ನಿಯಂತ್ರಿಸಲಾಗದೆ. ರೈತರು ಹೈರಾಣಾಗಿ ಹೋಗಿದ್ದರು. ಅಲ್ಲದೆ ಗೋವಿನ ಜೋಳಕ್ಕೆ ಯೋಗ್ಯ ಬೆಲೆ ಸಿಗದೆ ಸಾಕಷ್ಟು ನಷ್ಟವನ್ನು ಹೊಂದಿದ್ದರು.

ಈ ಹಿನ್ನೆಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಎಣ್ಣೆ ಬೀಜಗಳಾದ ಸೋಯಾಬೀನ್ ಮತ್ತು ಶೇಂಗಾ ಬಿತ್ತನೆ ಕಡೆಗೆ ಗಮನ ಹರಿಸಿದ್ದಾರೆ. ಪರಿಣಾಮ ತಾಲ್ಲೂಕಿನಾದ್ಯಂತ ಒಂದೇ ದಿನದಲ್ಲಿ300ಕ್ವಿಂಟಲ್ ಸೋಯಾಬೀನ್ ಮತ್ತು 100 ಕ್ವಿಂಟಲ್ ಶೇಂಗಾ ಬಿತ್ತನೆ ಬೀಜಗಳು ಮಾರಾಟವಾಗಿವೆ.

ಈ ಸಾರಿ 209ಕ್ವಿಂಟಲ್ ಗೋವಿನ ಜೋಳದ ದಾಸ್ತಾನು ಮಾಡಲಾಗಿದ್ದು, ಅದರಲ್ಲಿ ಕೇವಲ 20 ಕ್ವಿಂಟಲ್ ಮಾತ್ರ ಮಾರಾಟವಾಗಿವೆ. ಇನ್ನೂ 140 ಕ್ವಿಂಟಲ್ ಸೋಯಾಬಿನ್, 143 ಕ್ವಿಂಟಲ್ ಶೇಂಗಾ, 20 ಕ್ವಿಂಟಲ್ ತೊಗರಿ, 10 ಕ್ವಿಂಟಲ್ ಹೆಸರು ದಾಸ್ತಾನಿದೆ. ರೈತರು ಅಗತ್ಯ ದಾಖಲೆಗಳನ್ನು ಹಾಜರಪಡಿಸಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮನವಿ ಮಾಡಿಕೊಂಡಿದ್ದಾರೆ.

ಬಿತ್ತನೆ ಬೀಜ ವಿತರಣೆಗೆ ಚಾಲನೆ: ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಶುಕ್ರವಾರ ಚಾಲನೆ ನೀಡಿದರು.

ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ಬೆನಕನಕೊಂಡ, ಜಿಲ್ಲಾ ಪ್ರತಿನಿಧಿ ಗಂಗಣ್ಣ ಎಲಿ, ಸಿ.ಆರ್.ಬಳ್ಳಾರಿ, ಎನ್.ಟಿ.ಪಾಟೀಲ, ಬಸವರಾಜ ಸಂಕಣ್ಣನವರ, ಶಿವಪ್ಪ ಪೋಟೇರ, ಎಸ್.ಎನ್.ತೋಟದ, ದಾನಪ್ಪ ಚೂರಿ, ಶಂಭನಗೌಡ ಪಾಟೀಲ, ಕೃಷಿ ಅಧಿಕಾರಿ ನಿಂಗಪ್ಪ ಕಾಕೋಳ, ನಾಗರಾಜ ಬನ್ನಿಹಟ್ಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-22-1196139211

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.