ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆ: ಆರೋಪಿ ಬಂಧನ

Last Updated 20 ಸೆಪ್ಟೆಂಬರ್ 2020, 2:32 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಸ್ಟೋನ್‌ ಕ್ರಷರ್‌ ಕಾವಲುಗಾರನಿಗೆ ಚಾಕುವಿನಿಂದ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ತುಮಕೂರಿನ ಅಲ್ಲಾಭಕ್ಷ ಅತ್ತಾವುಲ್ಲಾ ಎಂಬಾತನನ್ನು ಶನಿವಾರ ಬಂಧಿಸಲಾಗಿದೆ.

ಆರೋಪಿಗಳು ತುಮಕೂರ ಮೂಲದ ದರೋಡೆ ತಂಡಕ್ಕೆ ಸೇರಿದವರಾಗಿದ್ದು, ಕಳೆದ ಸೆ.10 ರಂದು ತಡರಾತ್ರಿ ರುದ್ರೇಶ ಚೂರಿ ಎಂಬವರಿಗೆ ಸೇರಿದ ಸ್ಟೋನ್ ಕ್ರಷರ್‌ಗೆ ನುಗ್ಗಿ ಅಂದಾಜು ₹ 5 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ದರೋಡೆ ಮಾಡಿದ್ದರು.

ಈ ಕುರಿತು ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಎಸ್‌ಪಿ ಕೆ.ಜಿ ದೇವರಾಜ, ಹೆಚ್ಚುವರಿ ಎಸ್‌ಪಿ ಮಲ್ಲಿಕಾರ್ಜುನ ಬಾಳದಂಡಿ, ಡಿವೈಎಸ್‌ಪಿ ವಿಜಯಾನಂದ ಎಂ, ಅವರ ಮಾರ್ಗದರ್ಶನದಲ್ಲಿ ಬ್ಯಾಡಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ದರೋಡೆ ಮಾಡಿದ ಸಾಮಗ್ರಿ ಹಾಗೂ ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಿದ್ದಾರೆ.

ಸಿಪಿಐ ಬಸವರಾಜ ಪಿ.ಎಸ್, ಪಿಎಸ್‌ಐ ಮಹಾಂತೇಶ ಎಂ.ಎಂ, ಅವರ ನೇತೃತ್ವದಲ್ಲಿ ಸಿಬ್ಬಂದಿ ಕೆ.ಎಂ.ಗಡಿಯಪ್ಪಗೌಡ್ರ, ಎಚ್.ಜಿ.ಕಡೇಮನಿ, ಲೋಕೇಶ ಲಮಾಣಿ, ಮೃತ್ಯುಂಜಯ ಎಚ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬೈಕ್‌ ಸವಾರ ಸಾವು

ಹಿರೇಕೆರೂರ: ತಾಲ್ಲೂಕಿನ ಜೋಗಿಹಳ್ಳಿ ಕ್ರಾಸ್‌ ಸಮೀಪ ಬೈಕ್‌ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ರಟ್ಟೀಹಳ್ಳಿ ತಾಲ್ಲೂಕು ಯಡಗೋಡ ಗ್ರಾಮದ ರಮೇಶಶಿದ್ಲಿಂಗಪ್ಪ ಮೋರೆ (36) ಮೃತಪಟ್ಟವರು.

ಪಟ್ಟಣದ ಉಪನೋಂ ದಣಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು, ಸೆ.10ರಂದು ಕರ್ತವ್ಯ ಮುಗಿಸಿಕೊಂಡು ರಾತ್ರಿ
ತನ್ನ ಬೈಕ್‌ ನಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT