ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ವಿಸ್ತರಣಾ ಕಾರ್ಯ 5ನೇ ದಿನವೂ ಮುಂದುವರಿಯಿತು. ಕಟ್ಟಡ ತೆರವು ಕಾರ್ಯಾಚರಣೆ ಶೇ 90ರಷ್ಟು ಪೂರ್ಣಗೊಂಡಿದೆ.

ಬೆಳಿಗ್ಗೆಯಿಂದ ದೊಡ್ಡ ಕಟ್ಟಡಗಳ ತೆರವು ಕಾರ್ಯ ಆರಂಭಗೊಂಡಿದ್ದು ಜನರು ಕುತೂಹಲದಿಂದ ವೀಕ್ಷಿಸಿದರು. ಮಣ್ಣಿನ ಹಳೆಯ ಕಟ್ಟಡವಾಗಿದ್ದರಿಂದ ರಸ್ತೆ ತುಂಬಾ ದೂಳು ಆವರಿಸಿತ್ತು. ತೆರವು ಕಾರ್ಯಾಚರಣೆಯ ಬಳಿಕ ರಸ್ತೆಯಲ್ಲಿ ಬಿದ್ದಿರುವ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮಂದಗತಿಯಲ್ಲಿ ಸಾಗಿತ್ತು. ಟ್ರ್ಯಾಕ್ಟರ್ ಸೌಲಭ್ಯ ಇನ್ನಷ್ಟು ಹೆಚ್ಚಿಸಿ ರಸ್ತೆಯನ್ನು ಬೇಗನೇ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಕೆಸಿಸಿ ಬ್ಯಾಂಕ್ನಿಂದ ಸುಭಾಸ ವೃತ್ತ, ಅಲ್ಲಿಂದ ಮುರಿಗೆಪ್ಪ ಶೆಟ್ಟರ ಅವರ ಕಟ್ಟಡದವರೆಗೆ ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಹಂಚಿಕೆ ಮಾಡಿರುವ ಅಂಗಡಿಗಳ ತೆರವಿಗೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು. ಆರ್ಸಿಸಿ ಕಟ್ಟಡವಾಗಿದ್ದರಿಂದ ತೆರವು ಕಾರ್ಯ ವಿಳಂಬವಾಯಿತು. ಇತ್ತ ಹಳೆಯ ಪುರಸಭೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದ್ದು, ಬಿದ್ದಿರುವ ವಸ್ತುಗಳ ವಿಲೇವಾರಿ ನಡೆಯಬೇಕಿದೆ. ಪುರಸಭೆಯ ಕಟ್ಟಡಗಳ ಅವಶೇಷ ತೆರವುಗೊಂಡಿಲ್ಲವಾದ ಕಾರಣ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.

ಬಾಡಿಗೆ ಅಂಗಡಿಗಳಿಗೆ ಬೇಡಿಕೆ: ಕೆಸಿಸಿ ಬ್ಯಾಂಕ್ನಿಂದ ಒಟ್ಟು 1,050 ಮೀ ರಸ್ತೆಯ ಎಲ್ಲ ಅಂಗಡಿಗಳ ತೆರವು ಕಾರ್ಯ ನಡೆಯುತ್ತಿರುವುದರಿಂದ ವರ್ತಕರು ಸಿಕ್ಕ ಸಿಕ್ಕಲ್ಲಿ ಬಾಡಿಗೆ ಪಡೆದು ವಸ್ತುಗಳನ್ನು ಸಂಗ್ರಹಿಸುತ್ತಿರುವುದು ಕಂಡು ಬಂದಿತು. ಹೀಗಾಗಿ ಹಳೆ ಮೆಣಸಿನಕಾಯಿ ಪೇಟೆ, ಬೆಣ್ಣಿ ಪೇಟೆ, ಹಳೆ ಪೇಟೆ ಮುಂತಾದ ಭಾಗದ ಕಟ್ಟಡಗಳಿಗೆ ಬೇಡಿಕೆ ಹೆಚ್ಚಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-22-1937135880

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.