ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ವಿಸ್ತರಣಾ ಕಾರ್ಯ ಕಳೆದ ವಾರದಿಂದ ಆರಂಭವಾಗಿದ್ದು ಶುಕ್ರವಾರವೂ ಮುಂದುವರಿಯಿತು.

ದೊಡ್ಡ ಕಟ್ಟಡಗಳ ತೆರವುಗೊಳಿಸುವ ಜವಾಬ್ದಾರಿಯನ್ನು ಕಟ್ಟಡದ ಮಾಲೀಕರೇ ವಹಿಸಿಕೊಂಡಿರುವುದರಿಂದ ತೆರವುಗೊಳಿಸುವ ಕಾರ್ಯ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ವಜ್ರದುಂಡಿ ಕಲ್ಲಿನಿಂದ ಕಟ್ಟಿದ ದೊಡ್ಡ ಕಟ್ಟಡಗಳನ್ನು ಒಡೆಯಲು ಸಮಸ್ಯೆಯಾಗಿದ್ದು, ಯಂತ್ರಗಳ ಬಳಕೆ ಇಲ್ಲದೇ ಕಾರ್ಮಿಕರಿಂದ ಮಾಡಿಸಲಾಗುತ್ತಿದೆ.

ಆದರೆ ಕಟ್ಟಡಗಳ ಅವಶೇಷ ವಿಲೇವಾರಿ ಮಾಡುವ ಕಾರ್ಯ ಮಾತ್ರ ಚುರುಕು ಪಡೆದುಕೊಂಡಿದೆ. ಎಪಿಎಂಸಿ ಎರಡನೇ ಗೇಟ್ನ ಎದುರು ಹಾಯ್ದು ಹೋಗುವ ಹಂಸಭಾವಿ ರಸ್ತೆಯ ಎರಡೂ ಬದಿಗಳ ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಬಂದಮ್ಮನವರ ಕಟ್ಟಡದ ತೆರವು ಕಾರ್ಯ ಶನಿವಾರ ಪೂರ್ಣಗೊಳ್ಳಲಿದೆ. ಶುಕ್ರವಾರ ಹೆಚ್ಚಿನ ಟ್ರ್ಯಾಕ್ಟರ್, ಟಿಪ್ಪರ್ಗಳನ್ನು ನಿಯೋಜಿಸಿದ ಕಾರಣ ಕಟ್ಟಡಗಳ ಅವಶೇಷದ ವಿಲೇವಾರಿ ಚುರುಕುಗೊಂಡಿದೆ.

ಇನ್ನೂ 25ಕ್ಕೂ ಹೆಚ್ಚು ಕಟ್ಟಡಗಳ ತೆರವು ಕಾರ್ಯ ಆಗಬೇಕಿದೆ. ಈಗ ಕೆಸಿಸಿ ಬ್ಯಾಂಕ್ನಿಂದ ಶೆಟ್ಟರ್ ಬಿಲ್ಡಿಂಗ್, ಮುರಿಗೆಪ್ಪ ಶೆಟ್ಟರ ಕಟ್ಟಡ, ಜೈನ್ ಮಂದಿರದ ಮುಖ್ಯ ದ್ವಾರ ಸೇರಿದಂತೆ ದೊಡ್ಡ ಕಟ್ಟಡಗಳ ತೆರವು ಇನ್ನೂ ಚುರುಕುಗೊಳ್ಳಬೇಕಾಗಿದೆ. ಒಂದು ವಾರದಲ್ಲಿ ತೆರವು ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಎಲ್ಲ ಅಂಗಡಿಗಳ ತೆರವು ಕಾರ್ಯದ ಬಳಿಕ ಮುಖ್ಯ ರಸ್ತೆ ಎಷ್ಟು ವಿಶಾಲವಾಗಿದೆ ಎನ್ನುವ ಸ್ಪಷ್ಟ ಚಿತ್ರಣ ದೊರೆಯಲಿದೆ. ಮಳೆ ಆರಂಭವಾದರೆ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಸಹಕರಿಸಿದರೆ ಮಾತ್ರ ನಿರ್ದಿಷ್ಟ ಅವಧಿಯಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ರಸ್ತೆಯ ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡಲು ರಸ್ತೆ ವಿಸ್ತರಣೆ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-22-640624653

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.