ಪ್ರಮೀಳಾ ಹುನಗುಂದ

ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿಯಲ್ಲಿರುವ ಜಾಗೆಯ ಭೂಸ್ವಾಧೀನ ಕಾರ್ಯಾ ಒಂದೆರಡು ಅಂಗಡಿಗಳನ್ನು ಹೊರತುಪಡಿಸಿ ಶನಿವಾರ ಬಹುತೇಕ ಪೂರ್ಣಗೊಂಡಿದೆ.

ತೆರವುಗೊಳಿಸಿದ ಹಳೆ ಕಟ್ಟಡಗಳ ಅವಶೇಷಗಳ ವಿಲೇವಾರಿ ಭರದಿಂದ ಸಾಗಿದ್ದು, ಒಂದು ವಾರದಲ್ಲಿ ಪೂರ್ಣಗೊ ಳ್ಳಲಿದೆ. ಮುಖ್ಯ ರಸ್ತೆಯಲ್ಲಿ ಚತುಸ್ಪಥ ರಸ್ತೆ ನಿರ್ಮಿಸುವ ಉದ್ದೇಶದಿಂದ ಅಗತ್ಯವಿರುವ 1,025 ಮೀ ಭೂಸ್ವಾಧೀನ ಪ್ರಕ್ರಿಯೆ ಅಂತಿಮವಾಗಿದೆ. ಕೆಲ ಭೂಮಾಲೀಕರು ತಮ್ಮ ಕಟ್ಟಡಗಳನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿದರೆ, ಉಳಿದವರು ಹಿಟಾಚಿ ಬಳಸಿ ತೆರವುಗೊಳಿಸುವ ಕಾರ್ಯಕ್ಕೆ ನೆರವಾದರು.

ಮುಖ್ಯ ರಸ್ತೆಯಲ್ಲಿನ ಕಟ್ಟಡಗಳ ಅವಶೇಷ ತೆಗೆಯವ ಕಾರ್ಯ ಭರದಿಂದ ಸಾಗಿದ್ದು ಮುಂದಿನ ಶನಿವಾರದೊಳಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಪ್ರತಿ ಹಂತದಲ್ಲಿಯೂ ರಸ್ತೆ ಮಧ್ಯದಿಂದ ತಲಾ 33 ಅಡಿ ತೆರವುಗೊಳಿಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಖಚಿತಗೊಳಿಸಿಕೊಳ್ಳುವುದು ನಿರಂತರವಾಗಿ ನಡೆಯಿತು.

₹13 ಕೋಟಿ ವೆಚ್ಚದ ಡಿಪಿಆರ್: ಪಟ್ಟಣದ ಅಭಿವೃದ್ಧಿಗೆ ಅಡಚಣೆಯಾ ಗಿದ್ದ ಕಟ್ಟಡಗಳ ಭೂಸ್ವಾಧೀನ ಪೂರ್ಣ ಗೊಂಡಿದ್ದು, 1,025 ಮೀ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕಾಗಿ ತಯಾರಿಸಿದ ವಿಸ್ತೃತ ಯೋಜನೆ ವರದಿ ಸಿದ್ಧಪಡಿಸಿ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ವಿಭಾಗಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ವಾರದಲ್ಲಿ ಅನುಮೋದೆನ ದೊರೆಯುವ ನೀರಿಕ್ಷೆ ಇದ್ದು ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಟೆಂಟರ್ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ಜುಲೈ ಮೊದಲ ವಾರದಲ್ಲಿ ಭೂಮಿ ಪೂಜೆ ನೆರವೇರಿಸಿ ಡಿಸೆಂಬರ್ ಅಂತ್ಯದವರೆಗೆ ಪೂರ್ಣ ಗೊಳಿಸುವ ಉದ್ದೇಶ ಹೊಂದಲಾಗಿದೆ.

ಇದರಲ್ಲಿ ಡಿವೈಡರ್, ಚರಂಡಿ, ಪಾದಚಾರಿ ಮಾರ್ಗ. ಫ್ಲೈಓವರ್ ನಿರ್ಮಾಣ ಸೇರಿದ್ದು, ರಸ್ತೆ ಮಧ್ಯದಲ್ಲಿ ದಿವೈಡರ್ನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತದೆ. ಎರಡೂ ಬದಿಗೂ ತಲಾ 7 ಮೀ ದ್ವಿಪಥ ರಸ್ತೆ ನಿರ್ಮಿಸಲಾಗುತ್ತದೆ ಎಂಬ ಮಾಹಿತಿ ಲಭ್ವವಾಗಿದೆ.

ಒಳಚರಂಡಿ ಮತ್ತು 24/7 ಕುಡಿಯುವ ನೀರಿನ ಯೋಜನೆ: ಪಟ್ಟಣದ ಮುಖ್ಯ ರಸ್ತೆಯ 1,025 ಮೀ ರಸ್ತೆಯನ್ನು ಹೊರತುಪಡಿಸಿ, ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ಮತ್ತು 24/7 ಕುಡಿಯುವ ನೀರಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಗುಮ್ಮನಹಳ್ಳಿ ರಸ್ತೆ ಸಂಪರ್ಕಿಸುವ ಸಂಗಮೇಶ್ವರ ನಗರದ ಕೆಲವು ಭಾಗಗಳಲ್ಲಿ ಕಳೆದ ಮೂರು ತಿಂಗಳ ಹಿಂದೆ ಪೈಪ್ಲೈನ್ ಅಳವಡಿಸಿದ್ದರೂ, ನಳಗಳ ಜೋಡಣೆಯಾಗದೇ ಸಾಕಷ್ಟು ವಿಳಂಭವಾಗುತ್ತಿದೆ. ಅಲ್ಲದೆ ಕೆಲವು ಕಡೆ ಕಳಪೆ ಕಾಮಗಾರಿಯಿಂದ ಚೇಂಬರ್ಗಳು ಕುಸಿಯುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-22-227655561

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.