ಬ್ಯಾಡಗಿ: ‘ಮಹಿಳೆಯರು ಸಮಾನತೆ ಮತ್ತು ಒಗ್ಗಟ್ಟಿನಲ್ಲಿ ಮುಂದಿರುವುದರಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಮಹಿಳೆಯರ ಸಾಧನೆಗೆ ಗೌರವ ಸೂಚಿಸುವ ಮಹತ್ವದ ದಿನ ಇದಾಗಿದೆ’ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಸಂಜೀವಿನಿ ಮಹಿಳಾ ಒಕ್ಕೂಟ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಹಯೋಗದಲ್ಲಿ ಸೋಮವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಮಹಿಳೆಯರಿಗಾಗಿಯೇ ಶಕ್ತಿ ಯೋಜನೆಯನ್ನು ಜಾರಿಗೆ ತಂದು, ಮನೆಯ ಮುಖ್ಯಸ್ಥೆಗೆ ತಲಾ ₹2 ಸಾವಿರ ನೀಡುತ್ತಿರುವುದು ಮಹಿಳೆಯರಿಗೆ ನೀಡುವ ಗೌರವದ ಸಂಕೇತವಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ, ‘ಮಹಿಳೆಯರಲ್ಲಿ ಇರುವ ಭಾವನಾತ್ಮಕತೆ ಅತೀ ದೊಡ್ಡ ಶಕ್ತಿಯಾಗಿದೆ. ಓರ್ವ ಮಹಿಳೆ ಮನೆಯ ಜವಾಬ್ದಾರಿ ವಹಿಸಿಕೊಂಡಾಗ ಅದನ್ನು ಹೃದಯದಿಂದ ಮತ್ತು ಬುದ್ದಿವಂತಿಕೆಯಿಂದ ನಿಭಾಯಿಸುವ ಗುಣವನ್ನು ಹೊಂದಿರುತ್ತಾಳೆ’ ಎಂದರು.

ಈ ವೇಳೆ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ಶಿಂಗ್ರಿ, ಕಾರ್ಯದರ್ಶಿ ಪ್ರೇಮಾ ಸಪ್ಪಣ್ಣನವರ, ಸಿಡಿಪಿಒ ಚಂದ್ರಶೇಖರ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಶಂಭನಗೌಡ ಪಾಟೀಲ, ಸದಸ್ಯರಾದ ಹನುಮಂತಪ್ಪ ಕಾಟೇನಹಳ್ಳಿ, ಪೀರಾಂಬಿ ವರ್ದಿ, ಸುಶೀಲಾ ಲಮಾಣಿ ಹಾಗೂ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.