ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಜಾತಿ ನಿಂದನೆ ಮಾಡಿ, ಮಿಠಾಯಿ ಅಂಗಡಿ ಸುಟ್ಟು ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಾನಗಲ್ಲ ತಾಲ್ಲೂಕಿನ ಹೊಂಕಣ ಗ್ರಾಮದ ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಎನ್.ಎಂ.ರಮೇಶ ತೀರ್ಪು ನೀಡಿದ್ದಾರೆ.

ಹಾನಗಲ್ಲ ತಾಲ್ಲೂಕು ಹೊಂಕಣ ಗ್ರಾಮದ ಶಿವಕುಮಾರ ಶಿವಬಸಪ್ಪ ದಳವಾಯಿ ಅಪರಾಧಿ.

ಇದೇ ಗ್ರಾಮದ ಕೃಷ್ಣಪ್ಪ ಅಂಗಡಿ ಮನೆಯ ಪಕ್ಕದಲ್ಲಿ ಮಿಠಾಯಿ ಅಂಗಡಿ ನಡೆಸುತ್ತಿದ್ದರು. ಅಂಗಡಿ ಸಾಮಾನು ಸಾಗಿಸುತ್ತಿದ್ದ ವಾಹನ ಚಾಲಕ ಶಿವಕುಮಾರ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಶಿವಕುಮಾರ ಕೃಷ್ಣಪ್ಪನಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಲ್ಲದೇ, ಮಿಠಾಯಿ ಅಂಗಡಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ. ಅಂಗಡಿಯಲ್ಲಿದ್ದ ಸುಮಾರು ₹15 ಸಾವಿರ ಮೌಲ್ಯದ ಸಾಮಗ್ರಿ ಸುಟ್ಟು ಹೋಗಿತ್ತು.

ಸರ್ಕಾರಿ ಅಭಿಯೋಜಕಿ (ಪಿಪಿ) ಸರೋಜಾ ಕೂಡಲಗಿಮಠ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.