ಹಿರೇಕೆರೂರ: ‘ಹೈನು ರಾಸುಗಳಿಗೆ ಅಗತ್ಯ ಪಶು ಆಹಾರ, ಖನಿಜ ಮಿಶ್ರಣ ತಪ್ಪದೇ ನೀಡಬೇಕು. ವೈಜ್ಞಾನಿಕ ರೀತಿ ಹೈನುಗಾರಿಕೆ ನಡೆಸಿ ವರ್ಷಕ್ಕೆ ಒಂದು ಕರು ಪಡೆದರೆ ಹೈನುಗಾರಿಕೆಯಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯವಿದೆ’ ಎಂದು ಮುಖ್ಯ ಪಶುವೈದ್ಯಾಧಿಕಾರಿ (ವಿಸ್ತರಣೆ) ಡಾ.ಕವಿರಾಜ ಐರಣಿ ಹೇಳಿದರು.

ತಾಲ್ಲೂಕಿನ ಹಿರೇಬೂದಿಹಾಳ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ, ಕೃಷಿ ಇಲಾಖೆ ಹಾಗೂ ಜಲಾನಯನ ಇಲಾಖೆ ವತಿಯಿಂದ ವಿಶ್ವ ಬ್ಯಾಂಕ್ ನೆರವಿನ ರಿವಾಡ್೯ ಯೋಜನೆ ಅಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನುವಾರು ಆರೋಗ್ಯ ಉಚಿತ ತಪಾಸಣಾ ಶಿಬಿರ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

‘ವೈಜ್ಞಾನಿಕ ರೀತಿಯಲ್ಲಿ ಹೈನುಗಾರಿಕೆ ನಿರ್ವಹಣೆ ಮೂಲಕ ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ಉತ್ತಮ ರಾಸುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಜಾನುವಾರುಗಳಿಗೆ ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು. ಕರುಗಳ ಪೋಷಣೆ ಅಲಕ್ಷ್ಯ ಮಾಡದೇ ಪೋಷಕಾಂಶ, ಆಹಾರ ನೀಡಿದಾಗ ಉತ್ತಮ ಲಾಭ ಗಳಿಸಲು ಸಾಧ್ಯ‘ ಎಂದರು.

‘ಗರ್ಭ ಧರಿಸಿದ ಜಾನುವಾರುಗಳನ್ನು ಏಳು ತಿಂಗಳೊಳಗೆ ಹಾಲು ಹಿಂಡುವುದನ್ನು ನಿಲ್ಲಿಸಬೇಕು. ಇದರಿಂದ ಮುಂದೆ ಉತ್ತಮ ಹಾಲು ಕೊಡುತ್ತವೆ. ಗರ್ಭದ ರಾಸುಗಳಿಗೆ ಲವಣ ಮಿಶ್ರಣ, ಕ್ಯಾಲ್ಸಿಯಂ ಹಾಗೂ ಜಂತುನಾಶಕ ಹಾಕಬೇಕು’ ಎಂದು ತಿಳಿಸಿದರು.

ಪಶುವೈದ್ಯಾಧಿಕಾರಿ ಡಾ.ಶ್ರಾವ್ಯ, ಆಲದಗೇರಿ ಹಿರಿಯ ಪಶುವೈದ್ಯಕೀಯ ಪರೀಕ್ಷಕಹಾಲೇಶ ನಾಯಕ, ಜಲಾನಯನ ಇಲಾಖೆ ವ್ಯವಸ್ಥಾಪಕ ಗುರುರಾಜ ರಾಮಜ್ಜನವರ, ಹನುಮಂತರೆಡ್ಡಿ, ಸುರೇಶ ಸೊರಟೂರ, ಅಶೋಕ ಸೊರಟೂರ, ಕಿರಣ ಕುಶಲದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.