ರಾಣೆಬೆನ್ನೂರು: ‘ವಿಶ್ವಕರ್ಮ ಎಂದರೆ ಹಿಂದೂ ಧರ್ಮದ ಪುರಾಣಗಳ ಪ್ರಕಾರ ದೇವತೆಗಳ ಶಿಲ್ಪಿ. ವಿಶ್ವಕರ್ಮ ಅನ್ನುವ ಪಂಗಡಗಳು ಭಾರತದಲ್ಲಿ ಹಲವೆಡೆ ವಿಸ್ತರಿಸಿ ವಿಂಗಡಣೆಯಾಗಿದ್ದು, ಬಡಗಿತನದವರು, ಕಮ್ಮಾರರು, ಅಕ್ಕಸಾಲಿಗರು ಮತ್ತು ಪತ್ತಾರರು ಇವರೆಲ್ಲರೂ ರೈತರಿಗೆ ಹಾಗೂ ದೇಶಕ್ಕೆ ಬೆನ್ನೆಲುಬಿನಂತಿದ್ದಾರೆ ಎಂದು ವಿಶ್ವಕರ್ಮ ಮಹಾ ಸಂಸ್ಥಾನ ಸಾವಿತ್ರಿಪೀಠ ಕಾಶಿ ಮಠದ ವಡ್ನಾಳದ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿದ ಕಾಳಿಕಾದೇವಿ, ವಿಶ್ವಕರ್ಮ, ಗುರು ಮೌನೇಶ್ವರ ದೇವರ ಪ್ರತಿಷ್ಠಾಪನೆ, ಕದಳಿ ಚೇತನ ಹಾಗೂ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನವಲಗುಂದದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ, ಹುಲಗೂರಿನ ಮೌನೇಶ್ವರ ಮಠದ ಮೌನೇಶ್ವರ ಸ್ವಾಮೀಜಿ, ನಗರದ ವಿರಕ್ತಮಠದ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಂದ್ರಚಾರಿ ಪತ್ತಾರ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಅರುಣ್ ಕುಮಾರ ಪೂಜಾರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಗೌಡ ಶಿವಣ್ಣನವರ, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣ ತಮ್ಮಪ್ಪ ಬಾರ್ಕಿ, ಸಂತೋಷ್ ಕುಮಾರ್ ಪಾಟೀಲ ಮಾತನಾಡಿದರು.

ಗುರುಸಿದ್ಧನಗೌಡ ಪಾಟೀಲ, ಜಕಣಾಚಾರಿ ಮಾಯಾಚಾರಿ, ಬಸಪ್ಪ ಎತ್ತಿನಮನಿ, ಕುಮಾರ್ ತೋಟದ, ಮೌನೇಶ ಕಮ್ಮಾರ, ಗಂಗಾಧರ ಮನ್ವಾಚಾರಿ, ಚಂದ್ರಶೇಖರ್ ಕಮ್ಮಾರ ಇದ್ದರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-22-164574786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.