ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಚಿಕ್ಕಯ್ಯ– ದೊಡ್ಡಯ್ಯ ಕಾರ್ಯಕ್ರಮ

Last Updated 27 ಜೂನ್ 2022, 14:17 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಇಲ್ಲಿನ ಕೃಷ್ಣ ಮಂದಿರದ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ಸೋಮವಾರ ಚಿಕ್ಕಯ್ಯ ಹಾಗೂ ದೊಡ್ಡಯ್ಯ ಕಾರ್ಯಕ್ರಮ ವೈಭವದಿಂದ ನಡೆಯಿತು.

ಭಾನುವಾರ ಚಿಕ್ಕಯ್ಯ ಕಾರ್ಯಕ್ರಮ ಜರುಗಿತು. ಸೋಮವಾರ ದೊಡ್ಡಯ್ಯ ಕಾರ್ಯಕ್ರಮ ಹಾಗೂ ಮಲ್ಹಾರಿ ಹೋಮ ಕಾರ್ಯಕ್ರಮ ಜರುಗಿತು. ಅಗಡಿ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಅವರ ಸಾನ್ನಿಧ್ಯದಲ್ಲಿ ಭಾನುವಾರ ನೀಲಕಂಠ ನಾಡಿಗೇರ ಅವರ ಮನೆಯಿಂದ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಮಿಯನ್ನು ಸ್ವಾಗತಿಸಲಾಯಿತು. ಬಳಿಕ ಪುಣ್ಯಾಹ, ನಾಂದಿ, ಕಲಶ ಸ್ಥಾಪನೆ ಜರುಗಿತು.

ಬಳಿಕ ಶ್ರೀ ಮಾಲತೇಶ ಸ್ವಾಮಿಗೆ ಸಾಮೂಹಿಕ ಭಂಡಾರಾರ್ಚನೆ, ಚಿಕ್ಕಯ್ಯ ದೇವರಿಗೆ ಮಹಾನ್ಯಾಸಪೂರ್ವಕ ಲಘು ರುದ್ರಾಭಿಷೇಕಪೂಜೆ ಭಂಡಾರ ಅರ್ಚನೆ, ಗಂಗಾ ಪೂಜೆ, ಮಹಾ ನೈವೇದ್ಯ, ಮಹಾಪ್ರಸಾದ ನಡೆಯಿತು.

ಸೋಮವಾರ ಬೆಳಿಗ್ಗೆ ಶ್ರೀ ಮಲ್ಹಾರಿ ಹೋಮ, ಪೂರ್ಣಾಹುತಿ ಜರುಗಿತು. ಭರತ ಹನುಮಂತ ಜೋಶಿ ಮತ್ತು ಚೇತನ್ ಜೋಶಿ ಹಾಗೂ ವಿಪ್ರ ವೃಂದದವರು ಪೌರೋಹಿತ್ಯ ವಹಿಸಿದ್ದರು. ಅಗಡಿ ಆನಂದವನದ ಗುರುಭಟ್ಟ ಹಾಡಲಗೇರಿ ದಂಪತಿಗೆ ಸನ್ಮಾನ ಮಾಡಲಾಯಿತು. ಅಗಡಿ ಆನಂದವನದ ಶ್ರೀ ವಿಶ್ವನಾಥ ಚಕ್ರವರ್ತಿಗಳು ಶ್ರೀ ಮಲ್ಹಾರಿ ಮಹಾತ್ಮೆಯ ಕುರಿತು ಪ್ರವಚನ ನೀಡಿದರು.

ಅಗಡಿ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿಗಳಿಂದ ಆಶೀರ್ವಚನ ನೀಡಿದರು. ಈ ವೇಳೆ ವಿಪ್ರ ಸಮಾಜದ ಮುಖಂಡರಾದ ಮಹದೇವ ಪಾಟೀಲ, ವಸಂತ ಮೊಕ್ತಾಲಿ, ಮಾಲತೇಶ ಕರ್ಪೂರ, ರಮೇಶ ಕಡಕೋಳ, ರಮೇಶ ಕುಲಕರ್ಣಿ, ಹನುಮಂತನಾಯಕ ಬಾದಾಮಿ, ಕಾಂತೇಶ ಕುಲಕರ್ಣಿ, ದೀವಾಕರ್ ಬಾದಾಮಿ, ದತ್ತಾತ್ರೇಯ ಕುಲಕರ್ಣಿ, ಲಕ್ಷ್ಮಣ ತಾಳಿಕೋಟಿ, ಸೌರಭ್ ಕುಲಕರ್ಣಿ, ಪವನ ಬೊಮ್ಮನಹಳ್ಳಿ, ವಿಕಾಸ ಕುಲಕರ್ಣಿ, ಆದಿತ್ಯ ಸವಣೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT