ಬ್ಯಾಡಗಿ : ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಮಂಗಳವಾರ 18,615 ಚೀಲ (4,653 ಕ್ವಿಂಟಲ್) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಹೆಚ್ಚಳವಾಗಿದೆ.

ಕಳೆದ ಶುಕ್ರವಾರ ಮಾರುಕಟ್ಟೆಗೆ 17,771 ಚೀಲ (4,442 ಕ್ವಿಂಟಲ್) ಆವಕವಾಗಿತ್ತು. ಸದ್ಯ ಶೀತಲೀಕರಣ ಘಟಕಗಳಲ್ಲಿ ಸಂಗ್ರಹವಿರುವ ಮೆಣಸಿನಕಾಯಿ ಮಾರಾಟ ಮಾತ್ರ ನಡೆಯುತ್ತಿದ್ದು, ಮಂಗಳವಾರ ಮತ್ತು ಶುಕ್ರವಾರ ವಹಿವಾಟು ಹೆಚ್ಚು ನಡೆಯುತ್ತದೆ. ಮಂಗಳವಾರ 630 ಲಾಟ್ ಮೆಣಸಿನಕಾಯಿ ಚೀಲಗಳನ್ನು ಟೆಂಡರ್ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 51 ಲಾಟ್ಗಳಿಗೆ ಟೆಂಡರ್ ನಮೂದಿಸಿಲ್ಲ. 18 ಚೀಲ ಡಬ್ಬಿ ಮೆಣಸಿನಕಾಯಿ ₹ 29,500, 70 ಚೀಲ ಕಡ್ಡಿ ಮೆಣಸಿನಕಾಯಿ ₹ 27,509 ಮತ್ತು ಗುಂಟೂರು ತಳಿ ಮೆಣಸಿನಕಾಯಿ ₹ 16,709 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹ 25,009, ಬ್ಯಾಡಗಿ ಕಡ್ಡಿ ₹ 23,659 ಹಾಗೂ ಗುಂಟೂರ ತಳಿ ₹ 13,000 ರಂತೆ ಮಾರಾಟವಾಗಿದ್ದು, ಬೆಲೆಯಲ್ಲಿ ತುಸು ಹೆಚ್ಚಳ ಕಂಡು ಬಂದಿದೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ 117 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.