ಶನಿವಾರ, ಡಿಸೆಂಬರ್ 7, 2019
21 °C

‘ಫಿಶ್ ಪ್ರೈ’ ಮತ್ತು ‘ಮೀನಿನ ತಲೆ ‘ಸ್ಪೈಸಿ’ಗೆ ಮೊಹನ್ಸಾ ಹೋಟೆಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕುಮಾರಪಟ್ಟಣ: ‘ಫಿಶ್ ಪ್ರೈ’ ಮತ್ತು ‘ಮೀನಿನ ತಲೆ ಸ್ಪೈಸಿ’ಗೆ ಇಲ್ಲಿನ ಮೊಹನ್ಸಾ ಸಾವಾಜಿ ಹೋಟೆಲ್ ಮನೆ ಮಾತಾಗಿದೆ.

ಕಳೆದ 30 ವರ್ಷಗಳಿಂದ ಇಲ್ಲಿನ ಶಿವಾಜಿ ಹಾದಿಮನಿ ಹಾಗೂ ಸೋದರ ತುಕಾರಾಂಸಾ ನಡೆಸಿಕೊಂಡು ಬರುತ್ತಿರುವ ಈ ಹೋಟೆಲ್ ಅನ್ನು, ಮೊಹನ್ಸಾ ಹಾದಿಮನಿ ಆರಂಭಿಸಿದ್ದರು.

ಇಲ್ಲಿ ಹೊಳೆ ಮೀನಾದ ರೌ, ಕಾಟ್ಲ ತಂದು ಫಿಶ್ ಪ್ರೈ, ಫಿಶ್ ಡ್ರೈ, ಫಿಶ್ ಕರಿ, ಗ್ರೇವಿ, ತಲೆ ಸಾರು ತಯಾರಿಸುತ್ತೇವೆ. ಜೊತೆಗೆ ಚಿಕನ್, ಮಟನ್ ಪದಾರ್ಥಗಳನ್ನು ಮಧ್ಯಾಹ್ನ ಹಾಗೂ ರಾತ್ರಿ ಎರಡೊತ್ತು ಕೊಡುತ್ತೇವೆ ಎನ್ನತ್ತಾರೆ ಮಾಲೀಕ ಶಿವಾಜಿ ಹಾದಿಮನಿ.

ವಾರ ಇಲ್ಲವೇ 15 ದಿನಕ್ಕೊಮ್ಮೆ ಆದರೂ ಇಲ್ಲಿನ ಮೀನಿನ ವಿಶಿಷ್ಟ ರುಚಿ ಸವಿಯುತ್ತೇವೆ. ಸ್ವಚ್ಛತೆ ಜೊತೆ ಉತ್ತಮ ಸೇವೆ ನೀಡುತ್ತಾರೆ ಎನ್ನುತ್ತಾರೆ ಮಂಜುನಾಥ ಮಲ್ಲಳ್ಳಿ.

ಪ್ರತಿಕ್ರಿಯಿಸಿ (+)