ಭಾವನೆ ಕೆರಳಿಸಿದ ಎಚ್‌ಡಿಕೆ: ಉದಾಸಿ

7

ಭಾವನೆ ಕೆರಳಿಸಿದ ಎಚ್‌ಡಿಕೆ: ಉದಾಸಿ

Published:
Updated:
Deccan Herald

ಹಾವೇರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತ್ಯೇಕ ಉತ್ತರ ಕರ್ನಾಟಕದ ಭಾವನೆ ಕೆರಳಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಸಿ.ಎಂ. ಉದಾಸಿ ಆರೋಪಿಸಿದರು.

ಸುದ್ದಿಗಾರರ ಜೊತೆ ಇಲ್ಲಿ ಮಾತನಾಡಿದ ಅವರು, ರಾಜ್ಯದ ನಾಯಕತ್ವ ವಹಿಸಿದವರೇ ಪ್ರಾದೇಶಿಕ ಅಸಮಾನತೆಗೆ ಕಾರಣವಾಗಿದ್ದಾರೆ. ಅವರು ನನಗೆ ವೋಟು ಹಾಕಿಲ್ಲ, ಇವರು ಹಾಕಿಲ್ಲ ಎಂಬ ಭಾವನೆಯು ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಗಳಲ್ಲಿ ಇರಬಾರದು. ಅವರು ಎಲ್ಲ ಜನರ ಪ್ರತಿನಿಧಿ ಎಂದರು.

ಪ್ರಾದೇಶಿಕ ಅಸಮಾನತೆ ಆಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಬೇಕೇ ಹೊರತು, ಪ್ರತ್ಯೇಕ ರಾಜ್ಯಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಬೀದರ್‌ನಿಂದ ಚಾಮರಾಜನಗರ ತನಕದ ಹಲವಾರು ನಾಯಕರ ಹೋರಾಟದಿಂದ ಕರ್ನಾಟಕದ ಏಕೀಕರಣವಾಗಿದೆ. ಅದನ್ನು ಒಡೆಯುವ ಕೆಲಸ ಮಾಡಬಾರದು. ಈ ಬಗ್ಗೆ ಬಿಜೆಪಿ ಕೋರ್ ಸಮಿತಿಯಲ್ಲೂ ಚರ್ಚೆಯಾಗಿದ್ದು, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಸ್ಪಷ್ಟಪಡಿಸಿದ್ದಾರೆ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !