ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೂರ ಜಿ.ಪಂ. ಕ್ಷೇತ್ರ ರದ್ದತಿಗೆ ಖಂಡನೆ

Last Updated 10 ಮಾರ್ಚ್ 2021, 12:24 IST
ಅಕ್ಷರ ಗಾತ್ರ

ಹಾವೇರಿ: ಮೂವತ್ತು ವರ್ಷಗಳ ಹಿಂದೆ ರಚನೆಯಾಗಿರುವ ರಾಣೆಬೆನ್ನೂರುತಾಲ್ಲೂಕು ಕರೂರ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ರದ್ದುಗೊಳಿಸಿರುವುದನ್ನು ಖಂಡಿಸಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಕರೂರ ಗ್ರಾಮದ ಯುವ ಮುಖಂಡ ಸುಲ್ತಾನ ದೊಡ್ಡಮನಿ, ಕರೂರ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ರದ್ದುಗೊಳಿಸಿರುವ ಚುನಾವಣಾ ಅಧಿಕಾರಿಗಳ ಕ್ರಮ ಸರಿಯಲ್ಲ. ಕರೂರ ಗ್ರಾಮ 11 ಸಾವಿರ ಜನಸಂಖ್ಯೆ ಹೊಂದಿದೆ. ರೈಲ್ವೆ ನಿಲ್ದಾಣ ಬೀಜೋತ್ಪಾದನಾ ಕೇಂದ್ರ ಸೇರಿದಂತೆ ಭೌಗೋಳಿಕವಾಗಿ ಮಧ್ಯ ಭಾಗದಲ್ಲಿದ್ದರೂ ಕೂಡಾ ಸದರಿ ಕ್ಷೇತ್ರವನ್ನು ರದ್ದುಪಡಿಸುವುದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುಡದೇವಣ್ಣನವರ, ‘ಯಾವುದೇ ಕಾರಣಕ್ಕೂ ನಮ್ಮ ಕ್ಷೇತ್ರವನ್ನು ವಿಂಗಡಿಸದೇ ಯಥಾಸ್ಥಿತಿ ಕಾಪಾಡಬೇಕು. ಇದರಲ್ಲಿ ಏನಾದರೂ ಬದಲಾವಣೆ ಆದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮಾಲತೇಶ ಪೂಜಾರ, ಗೋವಿಂದರಾಜ ಬೆನ್ನೂರ, ಪ್ರಕಾಶ ಹೊರಕೇರ, ಅಮರೀಶ ರಾಹುತನಕಟ್ಟಿ, ಹನಮಂತಪ್ಪ ಕೊಳಚಿ, ಹನಮಂತ ಜಿಟ್ಟಿ, ಗುರುಬಸಯ್ಯ ಹಿರೇಮಠ, ದೇವೆಂದ್ರಪ್ಪ ಯಲಿಗಾರ, ಮಂಜುನಾಥ ಹಾದಗೇರಿ, ಮಾಲತೇಶ ಬಡಿಗೇರ, ಚಿನ್ನಪ್ಪ ಮುಡದೇವಣ್ಣನವರ, ತಿಪ್ಪೇಶ ಮಾಟೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT