ಕಳೆದ ಮೂರು ದಿನಗಳಿಂದ ಸತತ ಮಳೆ; ರೈತರಿಗೆ ಸಂತಸ

7

ಕಳೆದ ಮೂರು ದಿನಗಳಿಂದ ಸತತ ಮಳೆ; ರೈತರಿಗೆ ಸಂತಸ

Published:
Updated:
Deccan Herald

ರಾಣೆಬೆನ್ನೂರು: ತಾಲ್ಲೂಕಿನಾಧ್ಯಂತ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಎಲ್ಲೆಡೆ ಮೋಡ ಕವಿದ ವಾತಾವರಣ ತಂಪು ಹವಾಮಾನ ಇದೆ. ಕುಪ್ಪೇಲೂರು, ರಾಣೆಬೆನ್ನೂರು ಮತ್ತು ಮೇಡ್ಲೇರಿ ಈ ಮೂರು ಹೋಬಳಿಗಳಲ್ಲಿ ಉತ್ತಮ ಮಳೆ ಬಂದಿದೆ. ಎಲ್ಲೆಡೆ ಹಸಿರಿನಿಂದ ಕೂಡಿದೆ.

ಬಿತ್ತನೆ ಮುಗಿದು ಬೆಳೆಗಳು ಈಗ ಕಾಳು ಕಟ್ಟುವ ಹಂತಲ್ಲಿದ್ದವು.  ಹತ್ತಾರು ದಿನಗಳ ಹಿಂದೆ ಒಣ ಹವೆ ಬೀಸುತ್ತಿದ್ದರಿಂದ ಮೇಡ್ಲೇರಿ ಮತ್ತು ರಾಣೆಬೆನ್ನೂರು ಹೋಬಳಿಯ ಕೆಲ ಕಡೆ ಬೆಳೆಗಳು ಬಾಡುವ ಹಂತದಲ್ಲಿದ್ದವು. ಮತ್ತೆ ಎಲ್ಲಿ ಬರಗಾಲ ಆವರಿಸುತ್ತದೆ ಎಂಬ ಆತಂಕದಲ್ಲಿದ್ದೆವು. ಮೂರು ದಿನಗಳಿಂದ ಈಗ ಉತ್ತಮ ಮಳೆ ಬಂದಿದ್ದರಿಂದ ಮತ್ತೆ ಎಲ್ಲ ಬೆಳೆಗಳು ಪುನಶ್ಚೇತನ ಗೊಂಡಿವೆ.
ಕಳೆ ಕೀಳುವಲ್ಲಿ ಮತ್ತು ಮೇಲು ಗೊಬ್ಬರ ನೀಡುವಲ್ಲಿ ರೈತರು ಕಾರ್ಯಪ್ರವೃತ್ತರಾಗಿದ್ದಾರೆ. ಇದರಿಂದ ರೈತರಲ್ಲಿ ಮುಖದಲ್ಲಿ ಸಂತೋಷದ ಕಳೆ ತುಂಬಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್‌.ಬತ್ತಿಕೊಪ್ಪದ. 3ದಿನಗಳಿಂದ ಮಳೆ ಹಿಡಿದಿದ್ದರಿಂದ ನಗರದಲ್ಲಿ ಪಂಚಮಿ ಹಬ್ಬದ ವ್ಯಾಪಾರ ವಹಿವಾಟು ಸೋಮವಾರ ತುಸು ಚುರಾಕಾಗಿ ಕಂಡು ಬಂದಿತು.

ರಾಜ್ಯ ರೈತ ಸಂಘದ ಸಂಚಾಲಕ ರವೀಂದ್ರಗೌಡ ಪಾಟೀಲ ಪ್ರಜಾವಾಣಿಯೊಂದಿಗೆ ಮಾತನಾಡಿ, ಅಪ್ಪರ್‌ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಿಂದ ನೀರು ಹಾಯುವ ಜಮೀನುಗಳಿಲ್ಲಿನ ಬೆಳೆಗಳು ಉತ್ತಮವಾಗಿವೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಗಳು ಬಾಡುವ ಹಂತ ತಲುಪಿದ್ದವು ಎಂದರು.

ಬೆಳೆಗಳು ಬಾಡುತ್ತಿರುವುದು ಮತ್ತು ತಾಲ್ಲೂಕಿನಲ್ಲಿ ಎರಡು ಆತ್ಮ ಹತ್ಯೆ ಪ್ರಕರಣಗಳು ಆಗಿದ್ದಕ್ಕೆ ಪ್ರಸಕ್ತ ಸಾಲಿಗೆ ರಾಣೆಬೆನ್ನೂರು ತಾಲ್ಲೂಕು ಸೇರಿದಂತೆ 18 ಜಿಲ್ಲೆಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಎಂದು ಗೋಷಣೆ ಮಾಡಲು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕೂಡ ಮಾಡಿದ್ದೆವು.

ಎರಡು ಮೂರು ದಿನಗಳಲ್ಲಿ ಉತ್ತಮ ಮಳೆಯಾಗಿದ್ದಕ್ಕೆ ಬೆಳೆಗಳು ಮತ್ತೆ ಸ್ವಲ್ಪ ಚೇತರಿಸಿಕೊಂಡಿವೆ. ಇನ್ನು ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿಯುವ ಮಳೆಯಾಗಬೇಕು ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !