ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ಮೊತ್ತ ಪಾವತಿಗೆ ಗ್ರಾಹಕರ ಆಯೋಗ ಆದೇಶ

Last Updated 21 ಸೆಪ್ಟೆಂಬರ್ 2022, 13:56 IST
ಅಕ್ಷರ ಗಾತ್ರ

ಹಾವೇರಿ: ವಿಮಾ ಮೊತ್ತ ಪಾವತಿಸುವಂತೆ ಎಚ್.ಡಿ.ಎಫ್.ಸಿ. ಜೀವ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ರಾಯಚೂರು ಜಿಲ್ಲೆ ರಾಮರೆಡ್ಡಿ ಕ್ಯಾಂಪ್ ಮಲ್ಲಾಪೂರ ನಿವಾಸಿ ಅಮರಮ್ಮ ನೀಲಕಂಠಪ್ಪ ಅವರ ಮಗ ಅಮರೇಶ ನೀಲಕಂಠಪ್ಪ ಅವರು ಎಚ್.ಡಿ.ಎಫ್.ಸಿ ಜೀವ ವಿಮಾ ಕಂಪನಿಯಲ್ಲಿ ದಿನಾಂಕ:10-8-2018ರಂದು ₹10.50 ಲಕ್ಷ ಮೊತ್ತದ ಎಚ್.ಡಿ.ಎಫ್.ಸಿ. ಲೈಫ್ ಸಂಪೂರ್ಣ ಸಮೃದ್ಧಿ ಪ್ಲಸ್ ಹೆಸರಿನ ಪಾಲಿಸಿ ಪಡೆದಿದ್ದರು.

ದಿನಾಂಕ:18-9-2018ರಂದು ಆಕಸ್ಮಿಕವಾಗಿ ಹೃದಯಾಘಾತದಿಂದ ನಿಧನರಾಗಿದ್ದರು. ಮಗನ ಮರಣದ ನಂತರ ಪಾಲಿಸಿಯ ಹಣ ಪಡೆಯಲು ಕ್ಲೇಮ್ ಫಾರ್ಮ್‌ ಭರ್ತಿಮಾಡಿ ಅಗತ್ಯ ದಾಖಲೆಯೊಂದಿಗೆ ವಿಮಾ ಕಂಪನಿಗೆ ನೀಡಿದ್ದರು. ವಿಮಾ ಕಂಪನಿ ಪಾಲಿಸಿ ಹಣ ನೀಡಲು ನಿರಾಕರಿಸಿದ ಕಾರಣ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯರಾದ ಉಮಾದೇವಿ ಎಸ್.ಹಿರೇಮಠ ಅವರು, ವಿಮಾ ಮೊತ್ತ ₹10.50 ಲಕ್ಷ ಮೊತ್ತವನ್ನು 30 ದಿನದೊಳಗಾಗಿ ನೀಡಲು ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗೆ ₹2 ಸಾವಿರ, ಪ್ರಕರಣದ ಖರ್ಚು ₹2 ಸಾವಿರಗಳನ್ನು ಪಾವತಿಸಲು ಆದೇಶಿಸಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT