ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರ ಶಿಬಿರಕ್ಕೆ ಭೇಟಿ

Last Updated 5 ಏಪ್ರಿಲ್ 2020, 15:01 IST
ಅಕ್ಷರ ಗಾತ್ರ

ಹಾವೇರಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಲಸಿಗ ಕಾಮಿ೯ಕರಿಗಾಗಿ ವ್ಯವಸ್ಥೆ ಮಾಡಲಾದ ತಾತ್ಕಾಲಿಕ ವಸತಿ ಶಿಬಿರಗಳಿಗೆ ಹಿರಿಯ ನ್ಯಾಯಾಧೀಶೆ ಕೆ. ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿಗ್ಗಾವಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ವಾಸವಾಗಿರುವ ರಾಜಸ್ಥಾನದ 55 ವಲಸೆ ಕಾಮಿ೯ಕರ ವಾಸವಿರುವ ಶಿಬಿರಗಳಿಗೆ ಹಾಗೂ ಸವಣೂರು ತಾಲ್ಲೂಕಿನ ಜಲ್ಲಾಪುರದಲ್ಲಿರುವ ಪಂಚಾಬ್ ಮತ್ತು ಹರಿಯಾಣದ 35 ವಲಸಿಗ ಕಾಮಿ೯ಕ ವಾಸಿಸುವ ಶಿಬಿರಗಳಿಗೆ ಭೇಟಿ ನೀಡಿದರು. ವಲಸಿಗರ ಆರೋಗ್ಯ ತಪಾಸಣೆ, ಊಟ ಉಪಚಾರ, ವಸತಿ ಸೌಲಭ್ಯ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕುರಿತು ಪರಿಶೀಲಿಸಿದರು.

ನ್ಯಾಯಾಧೀಶರೊಂದಿಗೆ ಮಾತನಾಡಿದ ವಲಸೆ ಕಾಮಿ೯ಕರು ಸ್ಥಳೀಯ ಆಡಳಿತ ಕಲ್ಪಿಸಿರುವ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಸ್ವಗ್ರಾಮಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡರು.

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಅನಪೂರ್ಣ ಮುದುಕಮ್ಮನವರ, ಜಿಲ್ಲಾ ಕಾಮಿ೯ಕ ಅಧಿಕಾರಿ ಕಲಾವತಿ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ ಹಾಗೂ ಸ್ಥಳೀಯ ಅಧಿಕಾರಿಗಳು ವೈದ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT