ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಕಿರುಕುಳ: ಆರೋಪಿತರಿಗೆ 10 ವರ್ಷ ಜೈಲು

Published 18 ಆಗಸ್ಟ್ 2023, 14:43 IST
Last Updated 18 ಆಗಸ್ಟ್ 2023, 14:43 IST
ಅಕ್ಷರ ಗಾತ್ರ

ಹಾವೇರಿ: ತವರು ಮನೆಯಿಂದ ಹೆಚ್ಚುವರಿ ₹5 ಲಕ್ಷ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪಿತರಾದ ಮದರ್‌ ಅಲಿ ಅಬ್ದುಲ್‌ ಖಾದರ್‌ ಜಿಲಾನಿ ಕಾಗಿನೆಲ್ಲಿ, ದಿಲ್‍ಶಾದಬೇಗಂ ಕೋಂ ಅಬ್ದುಲ್‌ ಖಾದರ್‌ ಜಿಲಾನಿ ಹಾಗೂ ಅಬ್ದುಲ್‌ ಖಾದರ್‌ ಮದರಸಾಬ್‌ ಜಿಲಾನಿ ಅವರಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹12 ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀ ನಾರಾಯಣ ಅವರು ಗುರುವಾರ ಆದೇಶಿಸಿದ್ದಾರೆ. 

ಆಫ್ರಿನ್ ಅವರು ಮದರ್‌ ಅಲಿ ಅಬ್ದುಲ್‌ ಖಾದರ್‌ ಜಿಲಾನಿ ಕಾಗಿನೆಲ್ಲಿ ಅವರೊಂದಿಗೆ 28 ಎಪ್ರಿಲ್ 2019 ರಂದು ಮದುವೆಯಾಗಿದ್ದರು. ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ₹2 ಲಕ್ಷ, 3 ತೊಲೆ ಬಂಗಾರ, ಎರಡು ಬಂಗಾರದ ಉಂಗುರ ಮತ್ತು ಗೃಹಬಳಕೆ ಸಾಮಾನುಗಳನ್ನು ನೀಡಲಾಗಿತ್ತು.

ಮದುವೆಯ ನಂತರ ಆಫ್ರಿನ್ ಅವರಿಗೆ ಹೆಚ್ಚುವರಿಯಾಗಿ ₹5 ಲಕ್ಷ ತರುವಂತೆ ದಿಲ್‍ಶಾದಬೇಗಂ ಕೋಂ ಅಬ್ದುಲಖಾದರ ಜಿಲಾನಿ ಹಾಗೂ ಅಬ್ದುಲಖಾದರ ಮದರಸಾಬ ಜಿಲಾನಿ, ಬೀಬಿಫಾತಿಮಾ ಇರ್ಫಾನ ಶಂಸುದ್ದೀನ್ ಸವಣೂರ ಅವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುವುದರ ಜೊತೆಗೆ ಗ್ಯಾಸ್ ಸ್ಫೋಟ ಆಗುವಂತೆ ಸಿಲಿಂಡರ್‌ ನಾಬನ್ನು ಸಡಿಲ ಮಾಡಿ ಸಾಯುವಂತೆ ಮಾಡುವ ಅಪರಾಧಕ್ಕಾಗಿ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತನಿಖಾಧಿಕಾರಿ ಪಿ ಐ ಮಂಜಣ್ಣ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ.ಕೂಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT