ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಲ್ಲಿ 150 ಮಂದಿಗೆ ಕೋವಿಡ್‌

3,549ಕ್ಕೆ ಏರಿಕೆಯಾದ ಪಾಸಿಟಿವ್‌ ಪ್ರಕರಣಗಳು: ಆರು ಮಂದಿ ಸಾವು
Last Updated 24 ಆಗಸ್ಟ್ 2020, 15:25 IST
ಅಕ್ಷರ ಗಾತ್ರ

ಹಾವೇರಿ: ಆರೋಗ್ಯ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆ ಉದ್ಯೋಗಿಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ 150 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 221 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 3,549 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 2,177 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಸೋಮವಾರದ ಆರು ಮರಣ ಪ್ರಕರಣಗಳು ಸೇರಿ ಒಟ್ಟಾರೆ 80 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 1,292 ಸಕ್ರಿಯ ಪ್ರಕರಣಗಳಿವೆ.

ತಾಲ್ಲೂಕುವಾರು ವಿವರ:ಸವಣೂರು-3, ಶಿಗ್ಗಾವಿ-8, ಬ್ಯಾಡಗಿ-9, ಹಿರೇಕೆರೂರು-9, ಹಾನಗಲ್-13, ರಾಣೆಬೆನ್ನೂರು-29, ಹಾವೇರಿ-79 ಸೋಂಕು ಪ್ರಕರಣಗಳು ಸೋಮವಾರ ದೃಢಪಟ್ಟಿವೆ.

ಬಿಡುಗಡೆ:ಸೋಮವಾರ ಸೋಂಕಿನಿಂದ ಗುಣಮುಖರಾಗಿ ಸವಣೂರು-5, ಶಿಗ್ಗಾಂವ-17, ರಾಣೆಬೆನ್ನೂರು-123, ಹಾವೇರಿ-20, ಬ್ಯಾಡಗಿ-45, ಹಾನಗಲ್-10, ಹಿರೇಕೆರೂರು ತಾಲ್ಲೂಕಿನ ಒಬ್ಬರು ಬಿಡುಗಡೆ ಹೊಂದಿದ್ದಾರೆ.

ಮರಣದ ವಿವರ:ಹಾವೇರಿ ತಾಲ್ಲೂಕಿನ ಕಳ್ಳಿಹಾಳ ಗ್ರಾಮದ 50 ವರ್ಷದ ಪುರುಷ (ಪಿ-285970), ಗಣಜೂರ ಗ್ರಾಮದ 64 ವರ್ಷದ ಪುರುಷ (ಪಿ-288850), ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದ 60 ವರ್ಷದ ಮಹಿಳೆ (ಪಿ-288852), ಹಾವೇರಿಯ ದ್ಯಾಮವ್ವ ಗುಡಿ ಹತ್ತಿರದ 85 ವರ್ಷದ ಪುರುಷ (ಪಿ-284161), ಶಿವಾಜಿನಗರದ 44 ವರ್ಷದ ಪುರುಷ (ಪಿ-283699) ಹಾಗೂ ಶಿವಲಿಂಗನಗರದ 54 ವರ್ಷದ ಪುರುಷ (ಪಿ-285972) ಮೃತಪಟ್ಟಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ರ‍್ಯಾಪಿಡ್‌ ಆಂಟಿಜೆನ್‌ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿತ್ತು. ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT