ಶನಿವಾರ, ಆಗಸ್ಟ್ 13, 2022
23 °C

ಹಾವೇರಿ ಜಿಲ್ಲೆಯಲ್ಲಿ 172 ಮಂದಿಗೆ ಕೋವಿಡ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಆರೋಗ್ಯ ಹಾಗೂ ಪೊಲೀಸ್ ಇಲಾಖೆ ನೌಕರರು ಒಳಗೊಂಡಂತೆ ಜಿಲ್ಲೆಯಲ್ಲಿ ಮಂಗಳವಾರ 172 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 401 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ತಾಲ್ಲೂಕುವಾರು ವಿವರ: ಬ್ಯಾಡಗಿ-25, ಹಾನಗಲ್ 8, ಹಾವೇರಿ-64, ಹಿರೇಕೆರೂರು-24, ರಾಣೆಬೆನ್ನೂರು-26, ಸವಣೂರು-5, ಶಿಗ್ಗಾವಿ-20 ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿನಿಂದ ಗುಣಮುಖರಾಗಿ ಬ್ಯಾಡಗಿ-5, ಹಾನಗಲ್-18, ಹಾವೇರಿ-40, ಹಿರೇಕೆರೂರು-124, ರಾಣೆಬೆನ್ನೂರು-171, ಶಿಗ್ಗಾವಿ-37 ಹಾಗೂ ಇತರೆ ಆರು ಮಂದಿ ಬಿಡುಗಡೆ ಹೊಂದಿದ್ದಾರೆ.

ಮರಣ: ರಟ್ಟೀಹಳ್ಳಿಯ 78 ವರ್ಷದ ಪುರುಷ, ರಾಣೆಬೆನ್ನೂರು ತಾಲ್ಲೂಕು ಪತ್ತೆಪುರದ 68 ವರ್ಷದ ಪುರುಷ, ರಾಣೆಬೆನ್ನೂರು ನಗರದ 56 ವರ್ಷದ ಮಹಿಳೆ ಹಾಗೂ ಹಾವೇರಿ ಬಸವೇಶ್ವರ ನಗರದ 63 ವರ್ಷದ ಪುರುಷ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು