ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 220 ಮಂದಿಗೆ ಕೋವಿಡ್‌

Last Updated 14 ಸೆಪ್ಟೆಂಬರ್ 2020, 15:05 IST
ಅಕ್ಷರ ಗಾತ್ರ

ಹಾವೇರಿ: ಆರೋಗ್ಯ ಇಲಾಖೆ ನೌಕರರು ಒಳಗೊಂಡಂತೆ ಜಿಲ್ಲೆಯಲ್ಲಿ ಸೋಮವಾರ 220 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 193 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ತಾಲ್ಲೂಕುವಾರು ವಿವರ:ಬ್ಯಾಡಗಿ-21, ಹಾನಗಲ್ -17, ಹಾವೇರಿ-66, ಹಿರೇಕೆರೂರು-41, ರಾಣೆಬೆನ್ನೂರು-40, ಸವಣೂರು-8, ಶಿಗ್ಗಾವಿ-26 ಹಾಗೂ ಇತರೆ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಸೋಂಕಿನಿಂದ ಗುಣಮುಖರಾಗಿ ಬ್ಯಾಡಗಿ-1, ಹಾನಗಲ್-40, ಹಾವೇರಿ-86, ಹಿರೇಕೆರೂರು-29, ಶಿಗ್ಗಾವಿ-13, ರಾಣೆಬೆನ್ನೂರು-1, ಸವಣೂರು-17 ಹಾಗೂ ಇತರೆ ಆರು ಮಂದಿ ಬಿಡುಗಡೆ ಹೊಂದಿದ್ದಾರೆ.

ಮರಣ:ಸವಣೂರು ತಾಲ್ಲೂಕು ಚಿಲ್ಲೂರಬಡ್ನಿಯ 60 ವರ್ಷದ ಪುರುಷ ಹಾಗೂ ಹಾವೇರಿ ತಾಲ್ಲೂಕು ನೀರಲಗಿ ಗ್ರಾಮದ 70 ವರ್ಷದ ಪುರುಷ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT