ಶನಿವಾರ, ಸೆಪ್ಟೆಂಬರ್ 26, 2020
21 °C
ಜಿಲ್ಲೆಯಲ್ಲಿ 1889ಕ್ಕೆ ಏರಿಕೆಯಾದ ಪ್ರಕರಣಗಳು: 76 ಮಂದಿ ಗುಣಮುಖ

ಹಾವೇರಿ | ಪೊಲೀಸ್‌ ಸೇರಿ 45 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸರ್ಕಾರಿ ವೈದ್ಯರು, ಪೊಲೀಸ್ ಹಾಗೂ ಲ್ಯಾಬ್‍ ಟೆಕ್ನೀಶಿಯನ್‌ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ 45 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 76 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1889 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1098 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಸೋಮವಾರದ ಮೂರು ಸಾವು ಸೇರಿ ಒಟ್ಟಾರೆ 39 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 752 ಸಕ್ರಿಯ ಪ್ರಕರಣಗಳಿವೆ.

ಸೋಮವಾರ ಪತ್ತೆಯಾದ ಪ್ರಕರಣಗಳಲ್ಲಿ ಬ್ಯಾಡಗಿ-6, ಹಾನಗಲ್-3, ಹಾವೇರಿ-9, ಹಿರೇಕೆರೂರು-4, ರಾಣೆಬೆನ್ನೂರು-9, ಸವಣೂರ ಹಾಗೂ ಶಿಗ್ಗಾವಿ ತಲಾ 7 ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ವಿವರ: ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು-3, ಮಲ್ಲೂರ, ಶಿಡೇನೂರ, ಆಣೂರ ತಲಾ ಓರ್ವರಿಗೆ ಹಾಗೂ ಹಾನಗಲ್, ಬೊಮ್ಮನಹಳ್ಳಿ, ಅಕ್ಕಿಆಲೂರು ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ-3, ಹಾವನೂರು-2, ಹರಳಹಳ್ಳಿ, ಕಂಚಾರಗಟ್ಟಿ, ರಾಂಪುರ, ಹಂದಿಗನೂರು ತಲಾ ಒಬ್ಬರಿಗೆ ಹಾಗೂ ಸವಣೂರ-2 ಹಾಗೂ ಹತ್ತಿಮತ್ತೂರು-5, ರಾಣೇಬೆನ್ನೂರು-2, ಯಲ್ಲಾಪುರ, ಕುರುಬಗೇರಿ, ಅರೇಮಲ್ಲಾಪುರ ತಲಾ ಒಬ್ಬರಿಗೆ, ಶಿಗ್ಗಾವಿ-1, ಬಂಕಾಪುರ-2, ಬನ್ನೂರ-2, ಗಂಗೀಭಾವಿ, ಗಣಿಯನೂರ ತಲಾ ಒಬ್ಬರಿಗೆ, ಕಣವಿಸಿದ್ದಗೇರಿ-2 ,ಹಿರೇಕೆರೂರು, ಹಾಗೂ ಮಾಸೂರ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಮರಣದ ವಿವರ: ಹಾವೇರಿ ತಾಲೂಕಿನ ರಾಮಾಪುರದ 46 ವರ್ಷದ ಪುರುಷ (ಪಿ-156401) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 1ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆಗಸ್ಟ್ 2ರಂದು ಮೃತಪಟ್ಟಿದ್ದಾರೆ. 

ಹಿರೇಕೆರೂರು ತಾಲ್ಲೂಕಿನ ಮಾಸೂರ ಗ್ರಾಮದ 60 ವರ್ಷದ ಪುರುಷ (ಪಿ-185149) ಅನಾರೋಗ್ಯದಿಂದ ಮನೆಯಲ್ಲಿ ಆಗಸ್ಟ್ 9ರಂದು ಮೃತರಾಗಿದ್ದು, ಮೃತರ ಮೂಗಿನ ದ್ರವವನ್ನು ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿದ್ದು, ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ 45 ವರ್ಷದ ಮಹಿಳೆ (ಪಿ-186617) ಅನಾರೋಗ್ಯದಿಂದ ಮನೆಯಲ್ಲಿ ಆಗಸ್ಟ್ 9ರಂದು ಮೃತರಾಗಿದ್ದು, ಮೃತರ ಮೂಗಿನ ದ್ರವವನ್ನು ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಿದಾಗ, ಕೋವಿಡ್ ದೃಢಪಟ್ಟಿದೆ.

ಗುಣಮುಖ: ಸವಣೂರು-7, ಶಿಗ್ಗಾವಿ-15, ರಾಣೆಬೆನ್ನೂರು-6, ಹಾವೇರಿ-29, ಬ್ಯಾಡಗಿ-2, ಹಾನಗಲ್-11 ಹಾಗೂ ಹಿರೇಕೆರೂರು ತಾಲ್ಲೂಕಿನ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು