ಬುಧವಾರ, ಡಿಸೆಂಬರ್ 8, 2021
28 °C
ಜಿಲ್ಲೆಯಲ್ಲಿ 1242ಕ್ಕೆ ಏರಿಕೆಯಾದ ಪ್ರಕರಣಗಳು: 54 ಮಂದಿ ಗುಣಮುಖ, ವ್ಯಕ್ತಿ ಸಾವು

ಹಾವೇರಿ: ಶಿಕ್ಷಕ ಸೇರಿ 56 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಪೊಲೀಸ್‌ ಸಿಬ್ಬಂದಿ ಮತ್ತು ಶಿಕ್ಷಕ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ 56 ಮಂದಿಗೆ ಕೋವಿಡ್-19 ದೃಢಪಟ್ಟಿದೆ. 54 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1242 ಕೋವಿಡ್-19 ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 658 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 29 ಮಂದಿ ಮೃತಪಟ್ಟಿದ್ದಾರೆ. 555 ಪ್ರಕರಣಗಳು ಸಕ್ರಿಯವಾಗಿವೆ.

ಸೋಮವಾರ ಪತ್ತೆಯಾದ ಪ್ರಕರಣಗಳಲ್ಲಿ ಹಾನಗಲ್-1, ಸವಣೂರು-2, ಬ್ಯಾಡಗಿ-4, ಹಿರೇಕೆರೂರು-6, ಶಿಗ್ಗಾವಿ-8, ರಾಣೆಬೆನ್ನೂರು-14 ಹಾಗೂ ಹಾವೇರಿ ತಾಲ್ಲೂಕಿನಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ.

ಹಾನಗಲ್ ತಾಲ್ಲೂಕು

ಬೊಮ್ಮನಹಳ್ಳಿ ಗ್ರಾಮದ 48 ವರ್ಷದ ಪುರುಷ, ಸವಣೂರ ಮಂಗಳವಾರ ಪೇಟೆಯ 32 ವರ್ಷದ ಹಾಗೂ ಯಲವಿಗಿಯ 32 ಮಹಿಳೆಗೆ ಸೋಂಕು ದೃಢಪಟ್ಟಿದೆ.

ಬ್ಯಾಡಗಿ ತಾಲ್ಲೂಕು

ಬನ್ನಿಹಟ್ಟಿ ಜನತಾ ಪ್ಲಾಟ್‍ನ 82 ವರ್ಷದ ಪುರುಷ, 45 ವರ್ಷದ ಮಹಿಳೆ, 50 ವರ್ಷದ ಪುರುಷ ಹಾಗೂ ರಾಮಗೊಂಡನಹಳ್ಳಿಯ 81 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹಿರೇಕೆರೂರು ತಾಲ್ಲೂಕು

ಶಿರಗಂಬಿ ಗ್ರಾಮದ 62 ವರ್ಷದ ಪುರುಷ, ರಟ್ಟೀಹಳ್ಳಿ ಬಸವೇಶ್ವರನಗರದ 65 ವರ್ಷದ ಪುರುಷ, ಹಿರೇಕೆರೂರು ಚೌಡೇಶ್ವರಿನಗರದ 41 ವರ್ಷದ ಪುರುಷ, ಮಾಸೂರ ಗ್ರಾಮದ 21 ವರ್ಷದ ಯುವತಿ, 20 ವರ್ಷದ ಯುವತಿ ಹಾಗೂ 43 ವರ್ಷದ ಪುರುಷನಿಗೆ ಸೋಂಕು ತಗುಲಿದೆ. 

ಶಿಗ್ಗಾವಿ ತಾಲ್ಲೂಕು

ಮೆಹಬೂಬನಗರದ 43 ವರ್ಷದ ಪುರುಷ, ಕೆಇಬಿ ಹತ್ತಿರದ 28 ವರ್ಷದ ಪುರುಷ, ಮೌಲಾಲಿಗುಡ್ಡದ 32 ವರ್ಷದ ಮಹಿಳೆ, ಬಂಕಾಪುರ ಕೊಟ್ಟಿಗೇರಿ ಓಣಿಯ 62 ವರ್ಷದ ಪುರುಷ, ಹಳೇಪೇಟೆಯ 45 ವರ್ಷದ ಮಹಿಳೆ, ಬನ್ನೂರ ಗ್ರಾಮದ 65 ವರ್ಷದ ಪುರುಷ, ಶಿಗ್ಗಾವಿ ಶಾದಿಮಹಲ್ ಹತ್ತಿರದ 20 ವರ್ಷದ ಯುವತಿ, ಬಂಕಾಪುರದ 20 ವರ್ಷದ ಪುರುಷನಿಗೆ ಕೋವಿಡ್‌ ದೃಢಪಟ್ಟಿದೆ.

ರಾಣೆಬೆನ್ನೂರ ತಾಲ್ಲೂಕು

ಕೆಎಚ್‍ಬಿ ಕಾಲೋನಿಯ 38 ವರ್ಷದ ಮಹಿಳೆ, ದೇವರಗುಡ್ಡದ 31 ವರ್ಷದ ಪುರುಷ, ರಾಣೆಬೆನ್ನೂರಿನ 51 ವರ್ಷದ ಪುರುಷ, ಚರ್ಚ್ ಕಾಂಪೌಂಡ್‌ನ 3 ವರ್ಷದ ಬಾಲಕಿ, 4 ವರ್ಷದ ಬಾಲಕಿ, 40 ವರ್ಷದ ಮಹಿಳೆ, ಚರ್ಚ್ ರಸ್ತೆಯ 18 ವರ್ಷದ ಯುವತಿ, 40 ವರ್ಷದ ಮಹಿಳೆ, ಗೌರಿಶಂಕರ ನಗರದ 60 ವರ್ಷದ ಪುರುಷ, ಕುಮಾರಪಟ್ಟಣದ 32 ವರ್ಷದ ಪುರುಷ, ರಾಣೆಬೆನ್ನೂರು ಚರ್ಚ್ ಕಂಪೌಂಡ್‌ನ 48 ವರ್ಷದ ಪುರುಷ, ಹೊನ್ನತ್ತಿ ಪಿ.ಎಚ್.ಸಿ.ಯ 30 ವರ್ಷದ ಪುರುಷ, ಚೌಡದಾನಪುರದ 21 ವರ್ಷದ ಮಹಿಳೆ, ಅರೇಮಲ್ಲಾಪುರದ 45 ವರ್ಷದ ಪುರುಷನಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

ಹಾವೇರಿ ತಾಲ್ಲೂಕು

ಗುತ್ತಲದ 26 ವರ್ಷದ ಮಹಿಳೆ, ಅಗಡಿ ಗ್ರಾಮದ 41 ವರ್ಷದ ಪುರುಷ, 40 ವರ್ಷದ ಮಹಿಳೆ, ಹಾವನೂರ ಗ್ರಾಮದ 30 ವರ್ಷದ ಪುರುಷ, 56 ವರ್ಷದ ಪುರುಷ, ಸಂಗೂರ ಗ್ರಾಮದ 18 ವರ್ಷದ ಯುವಕ, ಗುತ್ತಲ ಪೊಲೀಸ್ ಠಾಣೆಯ 34 ವರ್ಷದ ಪೊಲೀಸ್, ಅಗಡಿ ಗ್ರಾಮದ 68 ವರ್ಷದ ಮಹಿಳೆ, ದೇವಿಹೊಸೂರ ಗ್ರಾಮದ 55 ವರ್ಷದ ಪುರುಷ, ಅಗಡಿ ಗ್ರಾಮದ 50 ವರ್ಷದ ಮಹಿಳೆ, ಗುತ್ತಲದ 11 ವರ್ಷದ ಬಾಲಕ, 14 ವರ್ಷದ ಬಾಲಕಿ, 11 ವರ್ಷದ ಬಾಲಕಿ, ಹಾವೇರಿ ನಾಗೇಂದ್ರನಮಟ್ಟಿಯ 58 ವರ್ಷದ ಪುರುಷ, ಕೆರೆಮತ್ತಿಹಳ್ಳಿ ಪೊಲೀಸ್ ವಸತಿ ಗೃಹದ 33 ವರ್ಷದ ಪುರುಷ, ಹಾವೇರಿ ಕೋಡಿ ಓಣಿಯ 48 ವರ್ಷದ ಮಹಿಳೆ, ಹಾವೇರಿ ಎಸ್.ಪಿ. ಪೊಲೀಸ್ ವಸತಿ ಗೃಹದ 46 ವರ್ಷದ ಪುರುಷ, ಗುತ್ತಲದ 14 ವರ್ಷದ ಬಾಲಕ, 25 ವರ್ಷದ ಯುವತಿ, 35 ವರ್ಷದ ಪುರುಷ ಹಾಗೂ ಹಾವೇರಿ ವಿದ್ಯಾನಗರದ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಗುಣಮುಖರ ವಿವರ

ಸವಣೂರ-18, ಶಿಗ್ಗಾವಿ-05, ರಾಣೆಬೆನ್ನೂರು-06, ಹಾವೇರಿ-15, ಬ್ಯಾಡಗಿ-03, ಹಾನಗಲ್-06 ಹಾಗೂ ಹಿರೇಕೆರೂರು ತಾಲೂಕಿನ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವ್ಯಕ್ತಿ ಸಾವು

ಹಾವೇರಿ ನಗರದ ಕಲ್ಲುಮಂಟಪ ನಿವಾಸಿ 74 ವರ್ಷದ ಪುರುಷ (ಪಿ-118412) ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 29ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್ ಆಂಟಿಜನ್ ಟೆಸ್ಟ್‌ ಮೂಲಕ ಪರೀಕ್ಷಿಸಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಆಗಸ್ಟ್ 3 ರಂದು ಮೃತಪಟ್ಟಿದ್ದಾರೆ. ನಿಯಮದ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು