ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 77 ಮಂದಿಗೆ ಕೋವಿಡ್‌

Last Updated 29 ಸೆಪ್ಟೆಂಬರ್ 2020, 16:18 IST
ಅಕ್ಷರ ಗಾತ್ರ

ಹಾವೇರಿ: ಆರೋಗ್ಯ ಇಲಾಖೆ ನೌಕರರು ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 77 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, 41 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ತಾಲ್ಲೂಕುವಾರು ವಿವರ:

ಬ್ಯಾಡಗಿ–2, ಹಾನಗಲ್‌–9, ಹಾವೇರಿ–22, ಹಿರೇಕೆರೂರು–7, ರಾಣಬೆನ್ನೂರು–31, ಸವಣೂರು ತಾಲ್ಲೂಕಿನ 6 ಮಂದಿಗೆ ಕೋವಿಡ್‌ ದೃಢಪಟ್ಟಿದೆ.

ಬ್ಯಾಡಗಿ– 9, ಹಾನಗಲ್‌–4, ಹಾವೇರಿ–7, ರಾಣೆಬೆನ್ನೂರು–19 ಹಾಗೂ ಸವಣೂರು ತಾಲ್ಲೂಕಿನ 2 ಮಂದಿ ಮಂಗಳವಾರ ಬಿಡುಗಡೆಯಾಗಿದ್ದಾರೆ.

ಮರಣದ ವಿವರ:

ಹಾನಗಲ್‌ ತಾಲ್ಲೂಕಿನ ಕೂಡಲ ಗ್ರಾಮದ 90 ವರ್ಷದ ಪುರುಷ ಮತ್ತು ಸುರಳೇಶ್ವರ ಗ್ರಾಮದ 69 ವರ್ಷದ ಮಹಿಳೆಗೆ ಕೋವಿಡ್‌ ದೃಢಪಟ್ಟಿದ್ದು, ಇವರ ಮರಣವನ್ನು ಮಂಗಳವಾರ ದೃಢೀಕರಿಸಲಾಗಿದೆ.

***

ಕೋವಿಡ್‌ ಅಂಕಿಅಂಶ

ಜಿಲ್ಲೆಯಲ್ಲಿ ಒಟ್ಟು:8691

ಸಕ್ರಿಯ ಪ್ರಕರಣ:1314

ಗುಣಮುಖ:7213

ಸಾವು:164

***

ಈ ದಿನದ ಏರಿಕೆ

ಹೊಸ ಪ್ರಕರಣ:77

ಗುಣಮುಖ:41

ಸಾವು:2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT