ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ವೈದ್ಯ ಸೇರಿ 90 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 1669ಕ್ಕೆ ಏರಿಕೆಯಾದ ಪ್ರಕರಣಗಳು: 88 ಮಂದಿ ಬಿಡುಗಡೆ
Last Updated 7 ಆಗಸ್ಟ್ 2020, 15:01 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರಿ ವೈದ್ಯ, ಪೊಲೀಸ್, ಶಿಕ್ಷಣ ಇಲಾಖೆ ಹಾಗೂ ಬ್ಯಾಂಕ್ ನೌಕರರುಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ 90 ಜನರಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 88 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1669 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 913 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಶುಕ್ರವಾರ ಒಂದು ಸಾವು ಸೇರಿ ಒಟ್ಟಾರೆ 33 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ.ಒಟ್ಟಾರೆ 723 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಶುಕ್ರವಾರ ದೃಢಗೊಂಡ ಪ್ರಕರಣಗಳಲ್ಲಿ ಬ್ಯಾಡಗಿ-3, ಹಾನಗಲ್-5, ಹಾವೇರಿ-11, ಹಿರೇಕೆರೂರು-11, ರಾಣೆಬೆನ್ನೂರು-40, ಸವಣೂರ-8, ಶಿಗ್ಗಾವಿ ತಾಲ್ಲೂಕಿನಲ್ಲಿ 12 ಪ್ರಕರಣಗಳು ದೃಢಪಟ್ಟಿವೆ. ಸೋಂಕಿನಿಂದ ಗುಣಮುಖರಾಗಿ ಸವಣೂರಿನ 9, ಶಿಗ್ಗಾವಿ 2, ರಾಣೆಬೆನ್ನೂರು-8, ಹಾವೇರಿ-45, ಬ್ಯಾಡಗಿ-4, ಹಾನಗಲ್-4, ಹಿರೇಕೆರೂರು ತಾಲ್ಲೂಕಿನ -16 ಮಂದಿ ಬಿಡುಗಡೆ ಹೊಂದಿದ್ದಾರೆ.

ವ್ಯಕ್ತಿ ಸಾವು:

ರಾಣೆಬೆನ್ನೂರ ನಗರದ 65 ವರ್ಷದ ಪುರುಷ (ಪಿ-162188) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 5ರಂದು ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದರು. ಆ ದಿನವೇ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆಗಸ್ಟ್ 6ರಂದು ಮೃತಪಟ್ಟಿರುತ್ತಾರೆ. ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಸೋಂಕಿತರ ವಿವರ:

ಹಾವೇರಿ ನಗರದ 7, ಬೆಳವಗಿ, ಗೂಡುರ, ದೇವಗಿರಿ, ಬೂದಗಟ್ಟಿಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಹಿರೇಕೆರೂರು ತಾಲ್ಲೂಕು ಹುಲ್ಲತ್ತಿ ಮೂವರಿಗೆ, ರಟ್ಟೀಹಳ್ಳಿಯ ಇಬ್ಬರಿಗೆ, ಯಲದಹಳ್ಳಿ, ಕೋಡ, ಬೆಣ್ಣಿಹಳ್ಳಿ ತಾಂಡಾ, ಚಿನ್ನಮುಳಗುಂದ, ಹಿರೇಮಾದಾಪುರ, ಚಿಕ್ಕದೇಸಾಯಿ ಹಳ್ಳಿಯ ತಲಾ ಒಬ್ಬರಿಗೆ, ಬ್ಯಾಡಗಿಯ ಪಟ್ಟಣದ ಇಬ್ಬರಿಗೆ, ಮೊಟೇಬೆನ್ನೂರನ ಒಬ್ಬರಿಗೆ, ಹಾನಗಲ್, ಅಕ್ಕಿಆಲೂರು, ಹೇರೂರ, ಅರಿಶಿಣಗುಪ್ಪಿ, ಕುರಬೇರಿ ತಲಾ ಒಬ್ಬರಿಗೆ, ಶಿಗ್ಗಾವಿ ಪಟ್ಟಣದಲ್ಲಿ 4, ಗಂಗೀಭಾವಿ -3, ಬಂಕಾಪುರ-3, ಅಂದಲಗಿ ಹಾಗೂ ಕುನ್ನೂರ ಗ್ರಾಮದಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ.

ರಾಣೆಬೆನ್ನೂರು ನಗರ ವಿವಿಧ ಬಡಾವಣೆಯ 20 ಮಂದಿಗೆ, ಸುಣಕಲ್ಲಬಿದರಿ-5, ಚಳಗೇರಿ-2, ಮಾಕನೂರ-2, ಅಂತರವಳ್ಳಿ, ಕೆರೆ ಮಲ್ಲಾಪುರ, ರೆಡ್ಡಿಯಲ್ಲಾಪುರ, ಬಿಲಹಳ್ಳಿ, ದೇವರಗುಡ್ಡ, ಕಜ್ಜರಿ, ಯಲ್ಲಾಪೂರ , ಕೆಣಕನಕೊಂಡ, ಯರೆಕುಪ್ಪಿ , ಕಮದೋಡ ಹಾಗೂ ನೆಲವಾಗಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಸವಣೂರ ಪಟ್ಟಣದ ಒಬ್ಬರಿಗೆ, ಕುರುಬರಮಲ್ಲೂರಿನ ಮೂವರಿಗೆ, ಮಾವೂರ, ಹೊಸಮನ್ನಂಗಿ, ಮನ್ನಂಗಿ, ಮಂತಗಿ ಗ್ರಾಮದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ‘ಕಂಟೈನ್‍ಮೆಂಟ್ ಜೋನ್’ ಹಾಗೂ ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT