ಮಂಗಳವಾರ, ಜೂನ್ 15, 2021
26 °C
2525ಕ್ಕೆ ಕೋವಿಡ್‌ ಪ್ರಕರಣಗಳು: 32 ಮಂದಿ ಗುಣಮುಖ; ನಾಲ್ವರ ಸಾವು

ಹಾವೇರಿ ಜಿಲ್ಲೆಯಲ್ಲಿ 42 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಪೊಲೀಸ್, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ 42 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಹಾಗೂ 32 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2525 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 1660 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಸೋಮವಾರದ ನಾಲ್ಕು ಮರಣ ಪ್ರಕರಣ ಸೇರಿ ಒಟ್ಟಾರೆ 56 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 809 ಸಕ್ರಿಯ ಪ್ರಕರಣಗಳಿವೆ.

ಸೋಮವಾರ ದೃಢಗೊಂಡ ಪ್ರಕರಣಗಳಲ್ಲಿ ಬ್ಯಾಡಗಿ-2, ಹಿರೇಕೆರೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ತಲಾ-3, ರಾಣೆಬೆನ್ನೂರು-4, ಸವಣೂರು ಹಾಗೂ ಹಾನಗಲ್ ತಾಲ್ಲೂಕಿನ ತಲಾ 5, ಹಾವೇರಿ-18 ಹಾಗೂ ಇತರೆ (ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಹಿರೇಕುರುವತ್ತಿ ಗ್ರಾಮದವರು) ಇಬ್ಬರಿಗೆ ಸೋಂಕು ದೃಢಪಟ್ಟಿದೆ.

ಬಿಡುಗಡೆ:

ರಾಣೆಬೆನ್ನೂರು-1 ಹಾನಗಲ್-ಹಿರೇಕೆರೂರು ತಲಾ -2, ಸವಣೂರು-5, ಶಿಗ್ಗಾವಿ-6 ಹಾಗೂ ಹಾವೇರಿ ತಾಲ್ಲೂಕಿನ 16 ಮಂದಿ ಸೋಮವಾರ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಬ್ಯಾಡಗಿ ಪಟ್ಟಣ ಹಾಗೂ ಆನೂರನಲ್ಲಿ ತಲಾ ಒಬ್ಬರು, ಶಿಗ್ಗಾವಿ, ಕಂಕಣವಾಡಿ, ಬೆಳಗಲಿಯಲ್ಲಿ ತಲಾ ಒಬ್ಬರಿಗೆ, ಹಾನಗಲ್, ತಿಳವಳ್ಳಿ, ಅಕ್ಕಿಆಲೂರು, ಬೊಮ್ಮನಹಳ್ಳಿ ಹಾಗೂ ಚಿಕ್ಕಉಲ್ಲಾಳದಲ್ಲಿ ತಲಾ ಒಬ್ಬರಿಗೆ, ರಾಣೆಬೆನ್ನೂರ ತಾಲ್ಲೂಕಿನ ಯರೇಕುಪ್ಪಿ-3 ಹಾಗೂ ಹನುಮಾಪುರದ ಒಬ್ಬರಿಗೆ, ಸವಣೂರ, ತೆವರಮೆಳ್ಳಿಹಳ್ಳಿ, ಕಳ್ಳಿಹಾಳ, ಶಿರಬಡಗಿ ತಲಾ ಒಬ್ಬರಿಗೆ , ಹಿರೇಕೆರೂರು, ಕೋಡಮಗ್ಗಿ ಹಾಗೂ ತಿಪ್ಪಾಯಿಕೊಪ್ಪದ ತಲಾ ಸೋಂಕು ದೃಢಪಟ್ಟಿದೆ.

ಹಾವೇರಿ-7, ದೇವಗಿರಿ-5, ಗುತ್ತಲ-2, ತಿಮ್ಮಾಪೂರ, ಬಸಾಪುರ, ಎಂ.ಜಿ.ನೀರಲಗಿ, ಅಗಡಿ, ತಲಾ ಒಬ್ಬರಿಗೆ ಕೋವಿಡ್‌ ದೃಢಪಟ್ಟಿದೆ.

ಮರಣದ ವಿವರ:

ಹಾವೇರಿ ತಾಲ್ಲೂಕು ದಿಡಗೂರ ಗ್ರಾಮದ 38 ವರ್ಷದ ಮಹಿಳೆ (ಪಿ-227293) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 14ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಪಾಸಿಟಿವ್ ದೃಢಪಟ್ಟಿದ್ದು, ಆಗಸ್ಟ್ 16ರಂದು ಮೃತಪಟ್ಟಿದ್ದಾರೆ.

ಹಾನಗಲ್ ತಾಲ್ಲೂಕಿನ ತಿಳವಳ್ಳಿಯ 62 ವರ್ಷದ ಪುರುಷ (ಪಿ-237214) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 16ರಂದು ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದರು. ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.

ಹಿರೇಕೆರೂರು ತಾಲ್ಲೂಕು ಕೋಡಮಗ್ಗಿಯ 53 ಪುರುಷ (ಪಿ-237630) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 15ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಪಾಸಿಟಿವ್ ದೃಢಪಟ್ಟಿದ್ದು, ಆಗಸ್ಟ್ 16ರಂದು ಮೃತಪಟ್ಟಿದ್ದಾರೆ.

ರಾಣೆಬೆನ್ನೂರು ಕುರಬಗೇರಿಯ 68 ವರ್ಷದ ಪುರುಷ (ಪಿ-213035) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 12- ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಪಾಸಿಟಿವ್ ದೃಢಪಟ್ಟಿದ್ದು, ಆಗಸ್ಟ್ 16ರಂದು ಮೃತಪಟ್ಟಿದ್ದಾರೆ. ಮೃತರನ್ನು ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು