ಬುಧವಾರ, ಅಕ್ಟೋಬರ್ 28, 2020
29 °C

ಹಾವು ಕಚ್ಚಿ ಹಸುಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಾರಪಟ್ಟಣ: ಸಮೀಪದ ಕರೂರು ಗ್ರಾಮದ ರೈತ ರಿಯಾಜ್ ಮಹಬೂಬಸಾಬ್ ಗವೆನವರ ಅವರು ವ್ಯವಸಾಯಕ್ಕೆಂದು ಸಾಕಿದ್ದ ಎರಡು ಹಸುಗಳು ಗುರುವಾರ ರಾತ್ರಿ ಹಾವು ಕಚ್ಚಿದ್ದರಿಂದ ಮೃತಪಟ್ಟಿವೆ. 

ರೈತ ರಿಯಾಜ್ ಮಾತನಾಡಿ, ಬೇಸಾಯಕ್ಕಾಗಿ 90 ಸಾವಿರ ಕೊಟ್ಟು ಖರೀದಿ ಮಾಡಲಾಗಿತ್ತು. ಇದರಿಂದ ನನ್ನ ಕೈ ಕಟ್ಟಿ ಹಾಕಿದಂತಾಗಿದೆ ಎಂದು ತನ್ನ ಅಳಲು ತೋಡಿಕೊಂಡರು.

ಈ ಕುರಿತು ಕುಮಾರಪಟ್ಟಣ ಠಾಣೆ ಎಎಸ್ಐ ಸಿ.ಡಿ.ನಡುವಿನಮನಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಮಂಜುನಾಥ ಗಂಗಮಾಳಮ್ಮನವರ, ಗ್ರಾಮ ಲೆಕ್ಕಾಧಿಕಾರಿ ಬಸವಂತಕುಮಾರ್ ಭೇಟಿ ನೀಡಿದರು. ಗ್ರಾಮದ ಮುಖಂಡರಾದ ಪ್ರಕಾಶ್ ಹೊರಕೇರಿ, ಪಕ್ಕಿರೇಶ್ ಕೊಲಾಟಿ, ರೈತ ಮುಖಂಡ ಬಸವಂತಪ್ಪ ಅಜ್ಜನವರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.