ಶಿಗ್ಗಾವಿ: ಗ್ರಾಮೀಣ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಈ ಸಂಸ್ಥೆ ವರದಾನವಾಗಿದ್ದು, ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ನಾಡಿಗೆ ಖ್ಯಾತಿ ತರುತ್ತಿದ್ದಾರೆ’ ಎಂದು ಗಂಗೆಭಾವಿ 10ನೇ ಕೆ.ಎಸ್.ಆರ್.ಪಿ ಕಮಾಂಡಂಟ್ ಎನ್.ಬಿ.ಮೆಳ್ಳಾಗಟ್ಟಿ ಹೇಳಿದರು.

ಪಟ್ಟಣದ ಫಿನಿಕ್ಸ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಶುಕ್ರವಾರ ಮೃತ್ಯುಂಜಯ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಮನೆ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಪ್ರೇರಣೆಯಾಗುವಂತೆ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಮೂಡಿಸುವ ಕಾರ್ಯ ನಡೆಯಬೇಕು. ಸಂಸ್ಕಾರಯುತ ಬದುಕು ವ್ಯಕ್ತಿಯ ವ್ಯಕ್ತಿತ್ವ ರೂಪಿಸುತ್ತದೆ. ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ನೀಡುವುದು ಮುಖ್ಯವಾಗಿದೆ’ ಎಂದರು.

‘ಸ್ಪರ್ಧಾತ್ಮಕ ಯುಗ ಎದುರಿಸಲು ವಿದ್ಯಾರ್ಥಿಗಳು ಸಿದ್ಧದರಿದ್ದಾರೆ. ಅಂಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಅವಶ್ಯವಾಗಿದೆ. ಹೊಸ ತಂತ್ರಜ್ಞಾನಗಳ ಬಳಕೆ ಅನಿವಾರ್ಯವಾಗಿದೆ. ಆದರೆ ಅವುಗಳಿಂದ ದುಷ್ಪರಿಣಾಮ ಬೀರಬಾರದು. ಮಕ್ಕಳು ಅಂಕಗಳಿಗೆ ಸೀಮಿತವಾಗದೇ, ಜ್ಞಾನ ವಿಕಾಸಗೊಳಿಸಬೇಕು. ಸಾಮಾಜಿಕ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಮೃತ್ಯುಂಜಯ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ನರಹರಿ ಕಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಇಂದಿನ ಶೈಕ್ಷಣಿಕ ಯುಗದಲ್ಲಿ ಪೈಪೋಟಿ ನಡೆಯುತ್ತಿದ್ದು, ಅದಕ್ಕೆ ನಮ್ಮ ಸಂಸ್ಥೆ ಜ್ಞಾನ ನೀಡಲು ಸಿದ್ಧವಾಗಿದೆ’ ಎಂದರು.

ಮೃತ್ಯುಂಜಯ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎಂ.ತಿರ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ದೊಡ್ಡಾಟ ಕಲಾವಿದರನ್ನು ಸನ್ಮಾನಿಸಲಾಯಿತು. ಹಿರಿಯ ದೊಡ್ಡಾಟ ಕಲಾವಿದ ಬಸವರಾಜ ಶಿಗ್ಗಾವಿ ಅವರ ನೇತೃತ್ವದಲ್ಲಿ ಮಕ್ಕಳ ದೊಡ್ಡಾಟ ಪ್ರದರ್ಶನ ನಡೆಯಿತು.

ಕಾರ್ಯದರ್ಶಿ ಡಾ.ರಾಣಿ ತಿರ್ಲಾಪುರ, ನಿರ್ದೇಶಕರಾದ ಸಿದ್ದನಗೌಡ ಪಾಟೀಲ, ಸುಮಿತ್ರಾ ಪಾಟೀಲ, ಲಕ್ಷ್ಮೀಬಾಯಿ ಕಟ್ಟಿ, ಪ್ರಾಚಾರ್ಯ ಶ್ರೀನಿವಾಸ ಮಡ್ಡಿ, ಉಪಪ್ರಾಚಾರ್ಯ ಹನುಮಂತ ಗೊರವರ ಸೇರಿದಂತೆ ಶಾಲೆ ಶಿಕ್ಷಕರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.