ಮಂಗಳವಾರ, ಜೂನ್ 22, 2021
28 °C

ದ್ಯಾಮವ್ವ ದೇವಿ ಅದ್ಧೂರಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಏಲಕ್ಕಿ ಕಂಪಿನ ನಗರದ ಪುರಾತನ ಮತ್ತು ಪ್ರಸಿದ್ಧ ಗ್ರಾಮ ದೇವತೆ ದ್ಯಾಮವ್ವ ದೇವಿ ಮೆರವಣಿಗೆಯು ಮಂಗಳವಾರ ಅದ್ಧೂರಿಯಾಗಿ ನಡೆಯಿತು. 

ಮೆರವಣಿಗೆಯು ದ್ಯಾಮವ್ವನ ಗುಡಿ ಓಣಿಯಿಂದ ಹೊರಟು ನಾಯ್ಕರ ಚಾಳ, ಹಳೇ ಅಂಚೆ ಕಚೇರಿ ರಸ್ತೆ, ಜೈನರ ಓಣಿ, ಹಳೇ ಊರಿನ ಓಣಿ, ಶ್ರೀರಾಮ ದೇವರ ಗುಡಿ, ಗಾಂಧಿ ಸರ್ಕಲ್ ತಲುಪಿತು. ನಂತರ ಕಲ್ಲು ಮಂಟಪ ರಸ್ತೆ, ಬಸ್ತಿ ಓಣಿ, ತರಕಾರಿ ಮಾರ್ಕೆಟ್, ಗೌಳಿಗಲ್ಲಿ, ಯಾಲಕ್ಕಿ ಓಣಿ, ಅಂಬೇಡ್ಕರ ಸರ್ಕಲ್, ಸುಭಾಷ್‌ ಸರ್ಕಲ್, ಮೇಲಿನ ಪೇಟೆ, ಹಳೇ ಚಾವಡಿ ಮೂಲಕ ಬುಧವಾರ ಬ್ರಾಹ್ಮೀ ಮೂಹೂರ್ತ ನಸುಕಿನ 4 ಗಂಟೆಗೆ ಚೌತಮನಿ ಕಟ್ಟಿಯನ್ನು ತಲುಪಿತು. ಅಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ದ್ಯಾಮವ್ವ ದೇವಿ ಮೆರವಣಿಗೆಯಲ್ಲಿ ಸಕಲ ವಾದ್ಯ, ಜಾಂಜ್‌, ಭಜಂತ್ರಿ, ಡೊಳ್ಳು, ಸಮಾಳ, ಉಡುಪಿ ಮದ್ದಳೆ, ಗೊಂಬೆಗಳು, ಮಹಿಳೆಯರ ಡೊಳ್ಳು, ಸಾಗರದ ಡೊಳ್ಳು ಮತ್ತು ಮೊಬೈಲ್‌ ಆರ್ಕೆಸ್ಟ್ರಾ ಕಲಾವಿದರು ನೆರೆದಿದ್ದ ಜನರನ್ನು ರಂಜಿಸಿದರು. 

ಶಾಸಕರಾದ ನೆಹರೂ ಓಲೇಕಾರ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್, ಮಾಜಿ ಶಾಸಕರಾದ ಶಿವರಾಜ ಸಜ್ಜನವರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೋಟ್ರೇಶಪ್ಪಾ ಬಸೇಗಣ್ಣಿ, ಕಾಂಗ್ರೆಸ್‌ ಮುಖಂಡ ಎಸ್.ಎಫ್.ಎನ್ ಗಾಜಿಗೌಡರ್, ನಗರಸಭೆ ಸದಸ್ಯರಾದ ಸಂಜೀವ ನೀರಲಗಿ, ಸಚ್ಚಿನ್ ಡಂಬಳ್, ಉಡಚ್ಚಪ್ಪ ಮಾಳಗಿ, ಜಿಲ್ಲಾ ವಾಲ್ಮೀಕಿ ಸಮುದಾಯದ ಅಧ್ಯಕ್ಷರಾದ ರಮೇಶ ಆನವಟ್ಟಿ ಪಾಲ್ಗೊಂಡಿದ್ದರು. 

ದ್ಯಾಮವ್ವ ದೇವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಹೂಗಾರ, ಗೌರವ ಕಾರ್ಯದರ್ಶಿ ಗಂಗಾಧರ ಹೂಗಾರ, ಕಾರ್ಯದರ್ಶಿ ಅಶೋಕ ಮುದಗಲ್ ಮತ್ತು ಸದಸ್ಯರು ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು