ಸೋಮವಾರ, ಅಕ್ಟೋಬರ್ 18, 2021
23 °C

ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಸವಲತ್ತು ಕಲ್ಪಿಸಲು ಒತ್ತಾಯಿಸಿ ಪ್ರತಿಭಟನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ಕೂಲಿಯ ಶೇ 50ರಷ್ಟು ಪಿಂಚಣಿಯಾಗಿ ₹6 ಸಾವಿರವನ್ನು ನಿಗದಿಪಡಿಸಬೇಕು ಎಂದು ‘ನಿವೃತ್ತ ಅಸಂಘಟಿತ ಕಾರ್ಮಿಕರ ಯೂನಿಯನ್‌ ಮತ್ತು ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ, ಶ್ರಮಜೀವಿ ಗ್ರಾಮೀಣ ಕೂಲಿ ಕಾರ್ಮಿಕರ ಯೂನಿಯನ್‌ ವತಿಯಿಂದ ಆಗ್ರಹಿಸಲಾಯಿತು. 

ದೇವಗಿರಿಯ ಜಿಲ್ಲಾಡಳಿತ ಭವನದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು. 

ನಿವೃತ್ತ ಹಿರಿಯ ಕಾರ್ಮಿಕರಿಗೆ ಯಾವುದೇ ಸರ್ಕಾರಿ ಪ್ರಯಾಣದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಧುಮೇಹ, ರಕ್ತದೊತ್ತಡ, ಮೂಳೆ ಸವೆತ ಕಾಯಿಲೆಗಳಿಗೆ ಉಚಿತವಾಗಿ ಮಾತ್ರೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು. 

ಎಲ್ಲ ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ಸ್ಥಳೀಯ ಸರ್ಕಾರಗಳು ಒಂದು ಹೊತ್ತಿನ ಮಧ್ಯಾಹ್ನದ ಬಿಸಿಯೂಟ ಒದಗಿಸಬೇಕು. ಕಟ್ಟಡ ಕಾರ್ಮಿಕರು, ಮನೆಗೆಲಸ ಕಾರ್ಮಿಕರು, ಬೀಡಿ ಕಟ್ಟುವವರು, ನರೇಗಾ ಕೂಲಿ ಕಾರ್ಮಿಕರು, ಅಗರಬತ್ತಿ ಸುತ್ತಿದವರು, ಚಪ್ಪಲಿ ಹೊಲೆದವರು ಮುಂತಾದವರಿಗೆ ಹಲವಾರು ವರ್ಷಗಳ ಶ್ರಮವನ್ನು ಸಾಬೀತುಪಡಿಸಲು ಇವರಿಗೆ ನೇಮಕಾತಿ ಪತ್ರವಾಗಲಿ, ಅನುಭವದ ದೃಢೀಕರಣವಾಗಲಿ ಅಗತ್ಯವಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ಕರಿಬಸಪ್ಪ ಎಂ, ಪಾರ್ವತಿ ಪೂಜಾರ, ಫಕ್ಕೀರಪ್ಪ ಎಸ್‌.ಸುಂಕದ್‌, ಚನ್ನಬಸಮ್ಮ ಎಂ.ಮಕರವಳ್ಳಿ, ಶಿವಗಂಗವ್ವ ಹಂಚಿನಮನಿ, ರೇಣುಕಾ ಹಂಚಿನಮನಿ, ಗಂಗವ್ವ ದಡ್ಡಿಕೊಪ್ಪ ಮುಂತಾದವರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು