ಪ

ಹಾವೇರಿ: ವಿಧಾನಸಭೆ ಉಪ ಸಭಾಪತಿಯೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ಕಾರ್ಟ್ ವಾಹನವು ವಾಕರಸಾಸಂ ಬಸ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಈ ಬಗ್ಗೆ ಹಾವೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಏಪ್ರಿಲ್ 2ರಂದು ನಡೆದಿರುವ ಅಪಘಾತದಲ್ಲಿ ಬಸ್ (ಕೆಎ 27 ಎಫ್ 0726) ಹಾಗೂ ಎಸ್ಕಾರ್ಟ್ ವಾಹನ ಎರಡಕ್ಕೂ ಹಾನಿಯಾಗಿದೆ. ಎಸ್ಕಾರ್ಟ್ ವಾಹನದ ಚಾಲಕರಾಗಿರುವ ಪೊಲೀಸ್ ಚನ್ನಬಸಪ್ಪ ಅರ್ಚಕ ವಿರುದ್ಧ ಅತೀ ವೇಗ ಹಾಗೂ ನಿರ್ಲಕ್ಷ್ಯ ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇಜಾರಿಲಕಮಾಪುರದ ಸಿದ್ದಾರೂಢ ಕಾಲೊನಿ ನಿವಾಸಿ ಚನ್ನಬಸಪ್ಪ ಅವರು ಹಳೇ ಪಿ.ಬಿ.ರಸ್ತೆಯ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದ ಕಡೆ ಹೊರಟಿದ್ದರು. ರಸ್ತೆಯಲ್ಲಿ ನಿಧಾನವಾಗಿ ಹೊರಟಿದ್ದ ಬಸ್ಗೆ, ಎಸ್ಕಾರ್ಟ್ ವಾಹನ ಗುದ್ದಿಸಿದ್ದರು. ಬಸ್ನ ಹಿಂಭಾಗಕ್ಕೆ ಹಾನಿಯಾಗಿದೆ. ಎಸ್ಕಾರ್ಟ್ನ ವಾಹನದ ಮುಂಭಾಗವೂ ಜಖಂಗೊಂಡಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.