ಭಾನುವಾರ, ನವೆಂಬರ್ 28, 2021
20 °C

ಎರೆ ದೊರೆ ಆಕತಲೆ, ದೈವ ದರ್ಬಾರ್‌ ಆಕತಲೆ ಪರಾಕ್‌: ದೇವರಗುಡ್ಡ ಕಾರ್ಣಿಕರ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ‘ಎರೆ ದೊರೆ ಆಕತಲೆ, ದೈವ ದರ್ಬಾರ್‌ ಆಕತಲೆ ಪರಾಕ್‌’ ಎಂದು ಗೊರವಯ್ಯ ನಾಗಪ್ಪಜ್ಜ ಅವರು ತಾಲ್ಲೂಕಿನ ದೇವರಗುಡ್ಡ ಮಾಲತೇಶ ದೇವರ ಸನ್ನಿಧಿಯಲ್ಲಿ ಗುರುವಾರ ಬಿಲ್ಲನ್ನೇರಿ ಕಾರ್ಣಿಕ ನುಡಿದರು. 

ಎರೆ ಎಂದರೆ ಮಣ್ಣು, ದೊರೆ ಎಂದರೆ ರಾಜ. ಈ ಬಾರಿಯ ಕಾರ್ಣಿಕದ ಅರ್ಥ ರೈತ ವರ್ಗ ದೊರೆಯಾಗಿ ಮೆರೆಯುತ್ತದೆ. ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ. ಜನರು ಸಂಕಷ್ಟದಿಂದ ಪಾರಾಗಲಿದ್ದಾರೆ. ಇದಕ್ಕೆ ದೈವದ ಆಶೀರ್ವಾದ ಇದೆ. ನಾಡಿನ ಸುಭಿಕ್ಷೆಯ ಕುರಿತು ಹಾಗೂ ರಾಜಕೀಯ ಬೆಳವಣಿಗೆ ವಿಚಾರ ಕಾರ್ಣಿಕದ ನುಡಿಯಲ್ಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್‌ ಪೂಜಾರ ಅರ್ಥೈಸಿದರು. 

ರಾಜಕೀಯವಾಗಿ ಹೇಳುವುದಾದರೆ, ಎರೆ ಎಂದರೆ ಕಟ್ಟಕಡೆಯದು ಎಂದರ್ಥ. ಜನತೆ ಮತ್ತು ದೈವ ಮೆಚ್ಚಿದ ಆಡಳಿತವನ್ನು ಈ ಸರ್ಕಾರ ನೀಡಲಿ ಎಂದು ಅರ್ಥೈಸಿಕೊಳ್ಳಬಹುದು ಎಂದು ಹೇಳಿದರು. 

ರಾಜ್ಯದ ವಿವಿಧ ಮೂಲೆಯಿಂದ ಬಂದಿದ್ದ ಭಕ್ತರು ಮಾಲತೇಶ ದೇವರ ದರ್ಶನ ಪಡೆದರು. ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಗೊರವಯ್ಯ ತಂಡದವರು ಭಕ್ತರ ಗಮನಸೆಳೆದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು