‘ಜನಗಣತಿ 2027 – ಸ್ವಯಂಗಣತಿ ಕಾರ್ಯವಿಧಾನವು ಡಿಜಿಟಲ್ ರೂಪದಲ್ಲಿ ಆರಂಭವಾಗುತ್ತಿದೆ. ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಜನರು ತಮ್ಮ ಜನಗಣತಿ ವಿವರಗಳನ್ನು ಆನ್‌ಲೈನಲ್ಲಿ ಭರ್ತಿ ಮಾಡಬೇಕು. ಹೆಸರು ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಆಗಬೇಕು. ನಂತರ ಮನೆಯನ್ನು ಗುರುತಿಸಿ ಕುಟುಂಬದ ವಿವರಗಳನ್ನು ಭರ್ತಿಮಾಡಬಹುದು. ಒಂದು ಮಾಹಿತಿ ದಾಖಲಿಸಲು 10 ನಿಮಿಷದಿಂದ 15 ನಿಮಿಷವಾಗುತ್ತದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದರು.