ಹಾವೇರಿ ಶ್ವಾನ ಘಟಕದಲ್ಲಿ ದಶಕದ ಸೇವೆ: ಭದ್ರತೆ ನೀಡಿದ್ದ ‘ಸ್ಕೂಬಿ’ಗೆ ಬೀಳ್ಕೊಡುಗೆ

ಮಂಗಳವಾರ, ಏಪ್ರಿಲ್ 23, 2019
27 °C
ರಾಷ್ಟ್ರಪತಿ, ಪ್ರಧಾನಿ, ಸಿಎಂ ಕಾರ್ಯಕ್ರಮಗಳಿಗೂ ರಕ್ಷಣೆ

ಹಾವೇರಿ ಶ್ವಾನ ಘಟಕದಲ್ಲಿ ದಶಕದ ಸೇವೆ: ಭದ್ರತೆ ನೀಡಿದ್ದ ‘ಸ್ಕೂಬಿ’ಗೆ ಬೀಳ್ಕೊಡುಗೆ

Published:
Updated:
Prajavani

ಹಾವೇರಿ: ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ದಶಕದ ಸೇವೆ ಸಲ್ಲಿಸಿದ ‘ಸ್ಕೂಬಿ’ಗೆ ಮಂಗಳವಾರ ವಯೋ ನಿವೃತ್ತಿ ಕಾರಣ ಬೀಳ್ಕೊಡಲಾಯಿತು. 

ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಪ್ರಮುಖರ ಕಾರ್ಯಕ್ರಮಗಳಿಗೆ ಸ್ಕೂಬಿ (ಲ್ಯಾಬ್ರಡಾರ್ ತಳಿ) ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಲ್ಲಿ ಭದ್ರತೆ ನೀಡಿತ್ತು. 2008ರ ಮಾರ್ಚ್‌ 31ರಂದು ಜನಿಸಿದ ಸ್ಕೂಬಿ, ಬೆಂಗಳೂರಿನ ಆಡುಗೋಡಿ ಪೊಲೀಸ್ ಶ್ವಾನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು 2009ರಿಂದ ಹಾವೇರಿಯಲ್ಲಿ ಸೇವೆಗೆ ಸೇರಿದೆ.

ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ, ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರ ಕೈಗಾ ಭೇಟಿ, ಈಚೆಗೆ ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸಿತ್ತು. ಇಲಾಖೆಯ ಎ.ಎಸ್‌.ಸಿ. ತಂಡದ ಜೊತೆಯಲ್ಲಿ ಸ್ಪೋಟಕ ಪತ್ತೆ ಸೇರಿದಂತೆ ಸುಮಾರು 560 ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿದೆ.  ಸ್ಕೂಬಿಯನ್ನು ಪ್ರಾಣಿ ಪ್ರಿಯರಾದ ಎಂ.ಜೆ.ಗೋಪಾಳಿ ಪಡೆದುಕೊಂಡರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ಹಾಗೂ ಜಿಲ್ಲಾ ಸಶಸ್ತ್ರ ಪಡೆಯ ಆರ್.ಪಿ.ಐ. ಮಾರುತಿ ಹೆಗಡೆ ಮಾರ್ಗದರ್ಶನದಲ್ಲಿ ಸಿ.ಬಿ.ಚಪ್ಪರದಹಳ್ಳಿ ಹಾಗೂ ಎಂ.ಎಚ್. ಹನುಮಣ್ಣನವರ ತರಬೇತಿ ಹಾಗೂ ಆರೈಕೆ ಮಾಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !