ಹಿರೇಕೆರೂರ: ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಬಾಳಕಟ್ಟೆ ಕೆರೆಯಲ್ಲಿ ಗ್ರಾಮದ ವೀರನಗೌಡ ಕೊಡಮಗ್ಗಿ ಅವರ ಜಮೀನು ಬದಿಯ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಬಾಳೆಕಟ್ಟೆ ಕೆರೆಯಲ್ಲಿ ರೈತರು ಹೂಳೆತ್ತುವಾಗ ಹಳೆಯ ಕಾಲದ ನಂದಿ ವಿಗ್ರಹ ದೊರೆತಿದೆ. ಚಾಲುಕ್ಯರ ಕಾಲದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಶಿವನ ವಾಹನವಾದ ಈ ಬಸವಣ್ಣನ ದರ್ಶನದಿಂದ ಗ್ರಾಮಸ್ಥರಲ್ಲಿ ಸಡಗರ ಮತ್ತು ಭಕ್ತಿಯ ವಾತಾವರಣ ಮನೆಮಾಡಿದೆ.

‘ಈ ಭೂಮಿಯಲ್ಲಿ ಇಂತಹ ಪುರಾತನ ಕುರುಹುಗಳು ಪತ್ತೆಯಾಗಿರುವುದು ನಮ್ಮ ಗ್ರಾಮದ ಪುಣ್ಯ ಮತ್ತು ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿದೆ’ ಎಂದು ಗ್ರಾಮಸ್ಥರೆಲ್ಲರೂ ವಿಗ್ರಹಕ್ಕೆ ಹೂವಿನ ಅಲಂಕಾರ ಮಾಡಿ ಪೂಜೆ ಮಾಡಿದರು.

ರಟ್ಟಿಹಳ್ಳಿ ಪ್ರಿಯದರ್ಶಿನಿ ಕಾಲೇಜಿನ ಉಪನ್ಯಾಸಕ ಚಾಮರಾಜ ಕಮ್ಮಾರ, ಇತಿಹಾಸ ಆಸಕ್ತ ಹಾಗೂ ಸಮುದಾಯ ಆರೋಗ್ಯಾಧಿಕಾರಿ ನಟರಾಜ ಕೆ.ವಿ. ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಸಣ್ಣ ಬಣಕಾರ, ಪಾಲಾಕ್ಷಪ್ಪ ಕಾಯಕದ, ವೀರನಗೌಡ ಕೊಡಮಗ್ಗಿ ಮತ್ತು ಗ್ರಾಮಸ್ಥರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-22-1908237186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.