ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಂಕಾರಣ್ಣ, ನಂದೀಹಳ್ಳಿಗೆ ಸಿ.ಜಿ.ಕೆ ರಂಗ ಪುರಸ್ಕಾರ

Last Updated 22 ಜೂನ್ 2020, 14:45 IST
ಅಕ್ಷರ ಗಾತ್ರ

ಹಾವೇರಿ: ಖ್ಯಾತ ರಂಗಕರ್ಮಿ ದಿ.ಸಿ.ಜಿ.ಕೆ ಅವರ ಜನ್ಮ ದಿನದಂದು (ಜೂನ್‌ 27) ಪ್ರತಿವರ್ಷ ರಂಗಭೂಮಿಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ಕೊಡ ಮಾಡುವ ಸಿ.ಜಿ.ಕೆ ರಂಗ ಪುರಸ್ಕಾರ ಈ ಬಾರಿ ಹಾವೇರಿ ಜಿಲ್ಲೆಯ ಇಬ್ಬರು ಯುವ ರಂಗಕರ್ಮಿಗಳಾದ ಜಿ.ಎಂ ಓಂಕಾರಣ್ಣನವರ ಮತ್ತು ಆರ್.ಸಿ ನಂದಿಹಳ್ಳಿ ಅವರಿಗೆ ಲಭಿಸಿದೆ.

ಬೆಂಗಳೂರಿನ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕರ್ನಾಟಕ ರಂಗ ಪರಿಷತ್ತು ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಸ್ಥಳೀಯ ಜಿಲ್ಲಾ ಕಲಾಬಳಗ ಇದನ್ನು ಐದು ವರ್ಷಗಳಿಂದ ನಡೆಸುತ್ತಾ ಬಂದಿದೆ. ಕೊಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಜಿ.ಎಂ. ಓಂಕಾರಣ್ಣನವರ 20 ವರ್ಷಗಳಿಂದ ನಾಟಕ ರಚನೆಯಲ್ಲಿ ತೊಡಗಿದ್ದು, ಈವರೆಗೆ 27 ನಾಟಕಗಳನ್ನು ಬರೆದು ಪ್ರಕಟಿಸಿದ್ದಾರೆ.

ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್‌ ಶಿಕ್ಷಕರಾಗಿರುವ ಆರ್.ಸಿ. ನಂದಿಹಳ್ಳಿಯವರು ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಉತ್ತಮ ಹಾಡುಗಾರರಾಗಿರುವ ನಂದಿಹಳ್ಳಿ ಅವರು ಅನೇಕ ನಾಟಕಗಳಲ್ಲಿ ಹಾಡುವುದರ ಜೊತೆಗೆ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT