ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಮಹೋತ್ಸವದ ರಥಯಾತ್ರೆಗೆ ಚಾಲನೆ

Last Updated 4 ಆಗಸ್ಟ್ 2022, 16:12 IST
ಅಕ್ಷರ ಗಾತ್ರ

ಹಾವೇರಿ:ಭಾರತದ ಅಮೃತ ಮಹೋತ್ಸವದ ಸವಿ ನೆನಪಿನಲ್ಲಿ, ಸ್ವಾತಂತ್ರ್ಯ ಯೋಧರ ತವರೂರೆಂದೇ ಪ್ರಸಿದ್ಧವಾದ ಕೋಗುನೂರ ಗ್ರಾಮದಲ್ಲಿ ಅಮೃತ ಮಹೋತ್ಸವ ರಥಯಾತ್ರೆ ಆರಂಭವಾಯಿತು.

ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘ ಆಯೋಜಿಸಿರುವ ಯಾತ್ರೆಗೆ ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಹಾಗೂ ಬ್ಯಾಡಗಿಯ ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ ಪ್ರತಿಷ್ಠಾನ ಸಹಯೋಗ ನೀಡಿವೆ.

ಸ್ವಾತಂತ್ರ್ಯ ಸಂಗ್ರಾಮಕ್ಕೆ 18 ಜನ ವೀರರನ್ನು ನೀಡಿದ ಕೋಗನೂರು ಗ್ರಾಮದ ಹುತಾತ್ಮ ವೀರಯ್ಯ ಹಿರೇಮಠ ಅವರ ಮನೆಯಿಂದ ಆರಂಭವಾದ ಯಾತ್ರೆಗೆ ಹಿರಿಯ ಲೇಖಕ ಸತೀಶ ಕುಲಕರ್ಣಿ ಚಾಲನೆ ನೀಡಿ ‘ದೇಶದ ತುಂಬ ಅಮೃತ ಮಹೋತ್ಸವದ ಸಂಭ್ರಮ ನಡೆದದ್ದು ಸ್ವಾತಂತ್ರ್ಯ ಯೋಧರ ಬಂಧು ಬಳಗದವರು ಏರ್ಪಡಿಸಿದ ಈ ಯಾತ್ರೆಗೆ ಒಂದು ವಿಶೇಷವಾದ ದೇಶಪ್ರೇಮದ ಸ್ಪರ್ಶವಿದೆ ಎಂದರು.

ಈ ಸಂದರ್ಭದಲ್ಲಿ ಹುತಾತ್ಮ ವೀರಯ್ಯ ಹಿರೇಮಠರ ಪುತ್ರ ವಿರೂಪಾಕ್ಷಯ್ಯ ಹಿರೇಮಠ ಮೈಲಾರ ಮಹಾದೇವರ ಸಹೋದರ ಪುತ್ರ ಪರಮೇಶ್ವರಪ್ಪ ಮೈಲಾರ ಹಾಗೂ ತಿರಕಪ್ಪ ಮಡಿವಾಳ ಅವರ ಸೋದರ ಸಂಬಂಧಿ ಚೆನ್ನಪ್ಪ ಮಡಿವಾಳರ ಅವರುಗಳನ್ನು ಡಾ. ಜಗದೀಶ ಮಹಾರಾಜಪೇಟ ಸನ್ಮಾನಿಸಿದರು.

ಕೋಗನೂರ ಗ್ರಾಮದಲ್ಲಿ ಪ್ರೊ.ಎಸ್.ಎನ್ ತಿಪ್ಪನಗೌಡ್ರ, ಶರಣಬಸವ ಚೆನ್ನೂರು ಬಿ.ಜಿ. ಭರಮಣ್ಣನವರ, ಎಚ್. ಎಸ್. ಹಾಲಪ್ಪ ಕೆಂಗುಡ್ಡಪ್ಪನವರ ಮುಂತಾದವರು ಮಾತನಾಡಿ ಕೋಗನೂರು ಗ್ರಾಮವನ್ನು ಅಮೃತ ಮಹೋತ್ಸವದ ಸಂಭ್ರಮದಲ್ಲಿ ಪರಿಗಣಿಸಿದ್ದಕ್ಕೆ ಕೃತಜ್ಞತೆಗಳನ್ನು ಹೇಳಿದರು.

ಅಮೃತ ಮಹೋತ್ಸವದ ರಥಯಾತ್ರೆಯ ನೇತೃತ್ವವನ್ನು ಶಿವಯೋಗಯ್ಯ ಬಿ. ಲೋಕನಗೌಡ್ರ, ಅರುಣಕುಮಾರ ಮನ್ನಂಗಿ, ಮೃತ್ಯುಂಜಯ ಕುಲಕರ್ಣಿ, ಶ್ರೀಮತಿ ಸೌಭಾಗ್ಯ ಎಸ್. ಲೋಕನಗೌಡ್ರ, ಡಾ. ಜಗದೀಶ ಮಹಾರಾಜಪೇಟ, ಪ್ರಕಾಶ ಪಿ. ಎಸ್. ಹಾಗೂ ಚಂದ್ರಕಲಾ ತಾಳೂರ ವಹಿಸಿದ್ದರು.

ಹಾಲಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್. ಬಿ. ದೊಡ್ಡಗೌಡರ, ಎಂ.ಎಚ್. ಡೋಲೆ, ಶಾರಕ್ಕ ಕರಿಯಣ್ಣನವರ, ವಿಜಯಕ್ಕ ಹೆಬ್ಬಾಳ ಹಿರೇಮಠ, ಗೋವನಗೌಡ ಕಾಕಡೆ, ಬಸಣ್ಣಯ್ಯ ಯಳವತ್ತಿಮಠ, ಮಹಾಂತಯ್ಯ ಕುಲಕರ್ಣಿ ನಾಗನಗೌಡ ಕಾಕಡೆ ಹಾಗೂ ಹನುಮಂತಪ್ಪ ಉಂಡಿ ರಥ ಯಾತ್ರೆಯನ್ನು ಸ್ವಾಗತಿಸಿಕೊಂಡರು.

ಕೋಗನೂರು ನಂತರ ರಥಯಾತ್ರೆಯು ಹಾಲಗಿ, ಬೆಳವಿಗಿ, ನೆಗಳೂರು, ಹೊಸರಿತ್ತಿಯ ಮೂಲಕ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಕೊನೆಯಲ್ಲಿ ರಟ್ಟೀಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದಲ್ಲಿ ವಾಸ್ತವ್ಯ ಹೂಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT