ಬುಧವಾರ, ಡಿಸೆಂಬರ್ 2, 2020
17 °C

ಹಾವೇರಿ: ಕಾಂಗ್ರೆಸ್‌ ಸೇರ್ಪಡೆಯಾದ ಡಾಂಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜೆಡಿಎಸ್ ರಾಜ್ಯ‌ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಡಾ.ಸಂಜಯ ಡಾಂಗೆ ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 

ಈ ಸಂದರ್ಭದಲ್ಲಿ ಡಾ.ಸಂಜಯ ಡಾಂಗೆ ಮಾತನಾಡಿ, ‘ಮತ್ತೆ ಕಾಂಗ್ರೆಸ್‌ಗೆ ಮರಳಿ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಆರ್.ಎಂ. ಕುಬೇರಪ್ಪ ಅವರನ್ನು ಬೆಂಬಲಿಸಿಲು ಮತದಾರರಲ್ಲಿ ಮನವಿ ಮಾಡುತ್ತೇನೆ. ಪಕ್ಷವನ್ನು ಕಟ್ಟಲು ಶ್ರಮಿಸುತ್ತೇನೆ ಎಂದರು. 

ರಬ್ಬಾನಿ ಹುಲಗೇರಿ, ಸಾಧೀಕ ನದಾಪ, ನೂರ ಅಹ್ಮದ ಹುಲಗೇರಿ, ಮಹಮ್ಮದ್ ಗೌಸ್ ಮತ್ತಿಹಳ್ಳಿ ಇತರರು ಡಾಂಗೆ ಅವರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 

ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಮುಖಂಡರಾದ ಸಿ.ಬಿ.ಕುರವತ್ತಿಗೌಡ್ರ, ಡಾ.ಎಳ್ಳಟ್ಟಿ, ಎಮ್.ಎಮ್.ಮೈದೂರ, ಪ್ರಭು ಬಿಷ್ಠನಗೌಡ್ರ, ಸೂಜಾತಪ್ಪ ಚೆನ್ನೂರ, ಶ್ರೀಧರ ದೊಡ್ಡಮನಿ, ಸತೀಶ ಈಳಿಗೇರ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು