ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ: ಕುಸ್ತಿ ಪಂದ್ಯಕ್ಕೆ ಚಾಲನೆ

Last Updated 31 ಜನವರಿ 2021, 3:00 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕು ಬಂಕಾಪುರ-ಮುನವಳ್ಳಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಶನಿವಾರ ಆಯೋಸಿದ್ದ ಕುಸ್ತಿ ಸ್ಪರ್ಧೆಗೆ ನಾರಾಯಣಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಉಮೇಶ ಅಂಗಡಿ ಚಾಲನೆ ನೀಡಿದರು.

ದೇವಸ್ಥಾನದ ಅರ್ಚಕ ಸೋಮಂತ ಪುಜಾರ ಕುಸ್ತಿ ಕಣಕ್ಕೆ ಪೂಜೆ ಸಲ್ಲಿಸಿದರು. ಶಂಖನಾದ ಮೊಳಗಿಸಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಕೋವಿಡ್ ಕಾರಣದಿಂದ ರಾಜ್ಯ ಮಟ್ಟದ ಪ್ರಸಿದ್ಧ ಪೈಲ್ವಾನರು ಪಂದ್ಯದಲ್ಲಿ ಭಾಗವಹಿಸದೇ ಇದ್ದದರಿಂದ ಕುಸ್ತಿ ಕಣ ಕಳೆಗುಂದಿತ್ತು.

ಜಾತ್ರೋತ್ಸವ ಕುಸ್ತಿ ಸಮಿತಿಯವರು ಪ್ರತಿವರ್ಷದ ಪದ್ದತಿಯಂತೆ ಸಾಂಕೇತಿಕವಾಗಿ ಬೈಲು ಕುಸ್ತಿ ನಡೆಸಿದರು. ಪಂದ್ಯ ವೀಕ್ಷಿಸಿಸಲು ಕಡಿಮೆ ಸಂಖ್ಯೆಯಲ್ಲಿ ಜನ ಸೇರಿದ್ದರು.

ಕಮಿಟಿ ಸದಸ್ಯರಾದ ಎಫ್.ಸಿ. ಕಾಡಪ್ಪಗೌಡ್ರ, ಸೋಮನಗೌಡ್ರ ಪಾಟೀಲ, ಬಸವರಾಜ ಕೂಲಿ, ಸಿದ್ದಯ್ಯ ಹಿರೇಮಠ, ಯಲ್ಲಪ್ಪ ದ್ವಾಸಿ, ಗದಿಗಯ್ಯ ಹಿರೇಮಠ, ಉಮೇಶ ಹಳವಳ್ಳಿ, ಪ್ರತಾಪಸಿಂಗ್ ಶಿವಪ್ಪನವರ, ನಿಂಗನಗೌಡ ಪಾಟೀಲ, ರಾಮನಗೌಡ ಪಾಟೀಲ, ಬಾಪುಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT