ಹಿರೇಕೆರೂರ: ‘ಪ್ರತಿಯೊಬ್ಬ ಮಗುವಿಗೂ ಆಲಿಸುವ ಕ್ರಿಯೆ ಬಹಳ ಮಹತ್ವದ್ದು. ಕಿವಿಗೆ ಸಂಬಂಧಿಸಿದ ಸಮಸ್ಯೆ ಉಂಟಾದರೆ ತಕ್ಷಣ ತಾಲ್ಲೂಕು ಆಸ್ಪತ್ರೆಯಲ್ಲಿರುವ ತಜ್ಞರನ್ನು ಸಂಪರ್ಕಿಸಬೇಕು’ ಎಂದು ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜಲಕ್ಷ್ಮೀ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆ ಈಚೆಗೆ ನಡೆದ ವಿಶ್ವ ಶ್ರವಣ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಿವಿ ನೋವಾದರೆ ಕಾಯಿಸಿದ ಎಣ್ಣೆ ಹಾಕುವುದು, ಕಿವಿಯಲ್ಲಿ ಉಪ್ಪಿನ ನೀರು ಹಾಕುವುದು, ಕಿವಿಯಲ್ಲಿ ಇರುವ ಧೂಳನ್ನು ತಾವೇ ತೆಗೆದುಕೊಳ್ಳುವುದು ಮಾಡಬಾರದು’ ಎಂದು ಅವರು ಹೇಳಿದರು.

‘ಸರ್ಕಾರ ಶೇ40ಕ್ಕಿಂತ ಹೆಚ್ಚು ಕಿವಿ ಕೇಳದಿದ್ದರೆ ಸರ್ಕಾರದಿಂದ ಯುಡಿಐಡಿ ಕಾರ್ಡ್ನ್ನು ಮಾಡಿಸಿಕೊಡಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳಿ’ ಎಂದು ಹೇಳಿದರು.

ಪ್ರತಿಯೊಬ್ಬ ಮಗುವಿನ ಶ್ರವಣದೋಷವನ್ನು ಪರೀಕ್ಷಿಸಿದರು. ಶಾಲೆಯಲ್ಲಿದ್ದ 226 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಎನ್.ಸುರೇಶ್ ಕುಮಾರ್ ವಹಿಸಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಂಪನ್ಮೂಲ ವ್ಯಕ್ತಿ ರಾಮಪ್ಪ, ಡಾ.ಸಂಗೀತ, ನಮ್ಮ ಕ್ಲಿನಿಕ್ ಆರೋಗ್ಯ ನೀರಿಕ್ಷಕ ಮಹಮ್ಮದ್ ಸೋಯಬ್, ಆಶಾ ಕಾರ್ಯಕರ್ತೆ ಆಹೆರಾ, ಶಾಂತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮೇಘರಾಜ ಮಾಳಗಿಮನಿ, ಬಸನಗೌಡ ಬಣಕಾರ, ಸುಧಾ ಡಿ ಬಣಕಾರ, ನಟರಾಜ, ಶಿವಕುಮಾರ ಸಾಲೇರ, ಕೆ.ಎಚ್. ಕಾಟೇನಹಳ್ಳಿ , ಪರಮೇಶ್ವರ ಹುಲ್ಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.