ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಭಾರತದ 12 ಮಂದಿ

Last Updated 27 ಏಪ್ರಿಲ್ 2018, 19:49 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಮಿತ್‌ ಸಂಗ್ವಾನ್‌ ಸೇರಿದಂತೆ ಭಾರತದ 12 ಬಾಕ್ಸಿಂಗ್‌ ಆಟಗಾರರು ಸರ್ಬಿಯಾದಲ್ಲಿ ನಡೆಯುತ್ತಿರುವ 56ನೇ ಬೆಲ್‌ಗ್ರೆಡ್‌ ಅಂತರರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ ಪ್ರವೇಶಿದ್ದಾರೆ.

ಪುರುಷರ 91 ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್‌ ನಲ್ಲಿ ಕೊಸ್ಟಾ ಬೊಜೊವಿಕ್‌ ಅವರನ್ನು ಸುಮಿತ್‌ ಮಣಿಸಿದರು. ಸೆಮಿಫೈನಲ್‌ ಪಂದ್ಯದಲ್ಲಿ ಸುಮಿತ್‌, ಗ್ರೀಸ್‌ನ ವಾಕಾ ನನಿಟ್ಜಾನಿಯನ್‌ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ನರೆಂದರ್‌ ಅವರು ಟರ್ಕಿಯ ಎರೆನ್‌ ಉಜುನ್‌ರನ್ನು ಮಣಿಸಿ ಸೆಮಿಫೈನಲ್‌ಗೆ ತಲುಪಿದರು.

69 ಕೆ.ಜಿ. ವಿಭಾಗದ ಪಂದ್ಯದಲ್ಲಿ ಪವನ್‌ ಕುಮಾರ್‌ ಅವರು ಗ್ರೀಸ್‌ನ ಅಥನ್ಯಾಸಿಯೊ ಗ್ಲಿನೊಸ್‌ರನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ತಲುಪಿದರು. 81 ಕೆ.ಜಿ. ವಿಭಾಗದಲ್ಲಿ ಟರ್ಕಿಯ ಬಯ್‌ರಾಮ್‌ ಮಲ್ಕನ್‌ರನ್ನು ನೀಲ್‌ಕಮಲ್‌ ಸಿಂಗ್‌ ಸೋಲಿಸಿದರು. 

ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ನಿಖತ್‌ ಜರೀನ್‌ ಅವರು ರಷ್ಯಾದ ಲಿಲಿಯಾ ಅಟ್‌ಬೆವಾ ಅವರನ್ನು ಸೋಲಿಸಿದರು. ಮಣಿಪುರದ ಲಾಲ್ದಿನ್‌ಮಾವಿಯಾ ಅವರು ಜರ್ಮನಿಯ ಹಮ್ಜಾ ಟೌಬಾ ಅವರನ್ನು ಪರಾಭವಗೊಳಿಸಿದರು.

60 ಕೆ.ಜಿ. ವಿಭಾಗದಲ್ಲಿ ಪ್ರಿಯಾಂಕಾ ಠಾಕೂರ್‌ ಅವರು ಬೊಜಾನಾ ರನಿಕ್‌ರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT