ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲ ಗ್ರಾಮಕ್ಕೆ ಇಒ ಸಲಹೆ

Last Updated 23 ಸೆಪ್ಟೆಂಬರ್ 2020, 15:50 IST
ಅಕ್ಷರ ಗಾತ್ರ

ಹಾವೇರಿ: ‘ಉದ್ಯೋಗ ಖಾತ್ರಿ ಯೋಜನೆಯಡಿ₹14 ಸಾವಿರ ವೆಚ್ಚದಲ್ಲಿ ಬಚ್ಚಲು ಗುಂಡಿ ನಿರ್ಮಿಸಿ ಅನಾರೋಗ್ಯ ತಡೆಯಿರಿ. ನಿಮ್ಮ ಗ್ರಾಮವನ್ನು ನಿರ್ಮಲ ಗ್ರಾಮವನ್ನಾಗಿಸಿ, ನಿಮ್ಮ ಮನೆ ಸುತ್ತಲೂ ಗಿಡಗಳನ್ನು ರಕ್ಷಿಸಿ, ಸೊಳ್ಳೆಗಳಿಂದ ದೂರ ಉಳಿಯಿರಿ’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಲಹೆ ನೀಡಿದರು.

ನಗರದ ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಪೌಷ್ಟಿಕ ತೋಟ ನಿರ್ಮಿಸಿ ಅನಾರೋಗ್ಯವನ್ನು ತೊಲಗಿಸಿ. ಶಾಲೆ ಅಂಗನವಾಡಿ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಲ್ಲಿ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ತೋಟವನ್ನು ನಿರ್ಮಾಣ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಅಣಬೆ ಬೇಸಾಯ ಶೆಡ್ ನಿರ್ಮಾಣ ₹ 95,000 ವೆಚ್ಚದಲ್ಲಿ ಕೈಗೊಂಡು, ಗ್ರಾಮೀಣ ಭಾಗದ ಸ್ತ್ರೀ-ಶಕ್ತಿ ಗುಂಪುಗಳಿಗೆ ನಿರಂತರ ಆದಾಯಕ್ಕೊಂದು ದಾರಿಯಾಗುತ್ತದೆ. ಅಣಬೆ ಕೆಜಿಗೆ ₹150ರಿಂದ 180ರವರೆಗೆ ಆದಾಯ ಗಳಿಸಬಹುದು. ಅಣಬೆ ಶೆಡ್‍ನಲ್ಲಿ ಕನಿಷ್ಠ ಪ್ರತಿ ತಿಂಗಳು 100ರಿಂದ 125 ಕೆ.ಜಿ. ಅಣಬೆ ಉತ್ಪಾದಿಸಬಹುದು. ಅಣಬೆಯನ್ನು ತಿನ್ನುವುದರಿಂದ ಪ್ರೋಟಿನ್‌ ಮತ್ತು ಫೈಬರ್ ಹೆಚ್ಚು ಪ್ರಮಾಣ ದೊರಕುತ್ತದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕರು, ತಾಲ್ಲೂಕು ಪಂಚಾಯಿತಿ ವಲಯ ಮೇಲ್ವಿಚಾರಕರು, ಸಾಮಾಜಿಕ ಲೆಕ್ಕ ಪರಿಶೋಧಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT